ನವದೆಹಲಿ: ಸೆರೊಟೈಪ್- II ಡೆಂಗ್ಯೂ ಪ್ರಕರಣಗಳ ಕುರಿತು ಕೇಂದ್ರವು ಶನಿವಾರ ಎಚ್ಚರಿಕೆ ನೀಡಿದೆ. ಅಲ್ವದೇ ಡೆಂಗ್ಯೂ ಮತ್ತು ಇತರ Vector-borne ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳನ್ನು ಒತ್ತಾಯಿಸಿದೆ.
ಕೋವಿಡ್-19 ಪರಿಸ್ಥಿತಿಯನ್ನು ಪರೀಕ್ಷಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು 11 ರಾಜ್ಯಗಳಲ್ಲಿ ಸೆರೋಟೈಪ್- II ಡೆಂಗ್ಯೂ ಪ್ರಕರಣಗಳ ಸವಾಲನ್ನು ಎತ್ತಿ ತೋರಿಸಿದ್ದಾರೆ,.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ರಾಜ್ಯಗಳು ಪ್ರಕರಣಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು, ಜ್ವರ ಸಹಾಯವಾಣಿಯ ಕಾರ್ಯಾಚರಣೆ ಮತ್ತು ಪರೀಕ್ಷಾ ಕಿಟ್‌ಗಳು, ಲಾರ್ವಿಸೈಡ್‌ಗಳು ಮತ್ತು ಔಷಧಿಗಳ ಸಮರ್ಪಕ ದಾಸ್ತಾನು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ. ತ್ವರಿತ ಪರೀಕ್ಷೆ ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳಾದ ಜ್ವರ ಸಮೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ, ವೆಕ್ಟರ್ ನಿಯಂತ್ರಣ, ರಕ್ತ ಮತ್ತು ರಕ್ತದ ಘಟಕಗಳು, ವಿಶೇಷವಾಗಿ ಪ್ಲೇಟ್‌ಲೆಟ್‌ಗಳ ಸಮರ್ಪಕ ಸಂಗ್ರಹಕ್ಕಾಗಿ ಬ್ಲಡ್ ಬ್ಯಾಂಕುಗಳಿಗೆ ಎಚ್ಚರಿಕೆ ನೀಡುವಂತೆ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.
ಹೆಲ್ಪ್‌ಲೈನ್‌ಗಳು, ವೆಕ್ಟರ್ ನಿಯಂತ್ರಣದ ವಿಧಾನಗಳು, ಮತ್ತು ಡೆಂಗ್ಯೂ ರೋಗಲಕ್ಷಣಗಳ ಕುರಿತು ಐಇಸಿ ಅಭಿಯಾನಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ವಿನಂತಿಸಿದೆ.
ಸೆರೊಟೈಪ್- II ಡೆಂಗ್ಯೂ ಪ್ರಕರಣಗಳನ್ನು ವರದಿ ಮಾಡಿದ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿವೆ.