ಶಿರಸಿ: ತಾಲೂಕಿನ ಕಾಳಂಗಿ ಸೇವಾ ಸರ್ಕಾರಿ ಸಂಘದ ಅಧ್ಯಕ್ಷ ಭೈರವ ಕಾಮದ ಅವರಿಗೆ ಆ ಭಾಗದ ರೈತರು ಸನ್ಮಾನ ಮಾಡಿದರು.
ಇವರು 22 ವರ್ಷಗಳ ಕಾಲ ಅಧ್ಯಕ್ಷರಾಗಿ ರೈತರಿಗೆ ಸರ್ಕಾರದ ಯೋಜನೆಗಳನ್ನು ತಲಿಪಿಸುತ್ತಾ, ಸಿಬ್ಬಂದಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಒಂದುಕೋಟಿ ಇಪತ್ತು ಲಕ್ಷ ರೂ.ಗಳ ಸೊಸೈಟಿ ನಿರ್ಮಾಣ ಸಂದರ್ಭದಲ್ಲಿ ಟಿಎಸ್‍ಎಸ್ ಸಿರಸಿ ಅವರೊಂದಿಗೆ ಸೂಪರ್ ಮಾರ್ಕೆಟ್ ಸಂಘದ ಬಿಲ್ಲಿನಂಗಡಿ ಪ್ರಾರಂಭದಲ್ಲಿ ಸಹಕಾರ ಮಾಡಿಕೊಟ್ಟಿದ್ದಾರೆ. ಅಲ್ಲದೇ ಆ ಭಾಗದ ಸಾರ್ವಜನಿಕರಿಗೆ ಅನೇಕ ರೀತಿಯ ಸಾಲಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸದಸ್ಯರಾದ ವಸಂತ ಗೌಡ್ರು, ಧನಂಜಯ್, ಗ್ರಾ.ಪ ಸದಸ್ಯ ನಟರಾಜ ನಗಾಪ್ಪ, ಮಾರುತಿ, ಗ್ರಾ.ಪ ಉಪಾಧ್ಯಕ್ಷ ಅಂಡಗಿ ಸಿದು ಗೌಡ್ರು, ರೈತರಾದ ದೇವರಾಜ್ ನಾಕ್, ರಾಮಾಪುರ ಯುವರಾಜಗೌಡ್ರು, ಚನಾಪ್ಪ ಗೌಡ್ರು, ಉದಯ ಗೌಡ್ರು, ಬಸವ ಗೌಡ್ರು, ಕಾಳಂಗಿ ಗೌಡಾ, ರಘುನಂದನ ನಾಕ್, ರಾಮಾಪುರ ಮಂಜು ಗೌಡ್ರು, ಹೊಸಕೊಪ್ಪ ರಾಘವ್ ದನಗನಹಳ್ಳಿ, ಎಂ.ಜಿ ಪಾಟೀಲ ಹೇಮನ್ನಾ ಬಸನ್ನ ರವಿ ಇನ್ನೂ ಅನೇಕರು ಉಪಸ್ಥಿತರಿದ್ದರು.