ಕಾರವಾರ : ಪಾದಚಾರಿಯೋರ್ವನಿಗೆ ಹಿಂಬದಿಯಿಂದ ಕಾರು ಗುದ್ದಿ ಮಹಿಳೆಯೊಬ್ಬಳು ಗಾಯಗೊಂಡ ಘಟನೆ ತಾಲೂಕಿನ ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಸ್ಪೋಟಿಯ ಮದೇವಾಡದ ಸತ್ಯಂ ಶ್ಯಾಮ ನಾಯ್ಕ ಎಂಬಾತನೇ ಕಾರು ಚಾಲಕನಾಗಿದ್ದು ಈತ ಸದಾಶಿವಗಡದ ಅಪೋಲೋ ಮೆಡಿಕಲ್ಸ್ ಹತ್ತಿರದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಮೋಹಿನಿ ಕಲ್ಲುಟ್ಕರ್ ಎಂಬ ಮಹಿಳೆಗೆ ಹಿಂಬದಿಯಿಂದ ಗುದ್ದಿದ್ದು ಪರಿಣಾಮ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರು ಚಾಲಕನ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ.
ಕಾರು ಗುದ್ದಿ ಮಹಿಳೆಗೆ ಗಾಯ
