• Slide
    Slide
    Slide
    previous arrow
    next arrow
  • ಪಿಎಂಕೆವಿವೈ ಅಡಿ ರೈಲು ಕೌಶಲ್ಯ ವಿಕಾಸ ಯೋಜನೆ ಆರಂಭ

    300x250 AD

    ನವದೆಹಲಿ: ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ (ಪಿಎಂಕೆವಿವೈ) ಯ ಅಡಿಯಲ್ಲಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ರೈಲು ಕೌಶಲ್ಯ ವಿಕಾಸ ಯೋಜನೆಯನ್ನು ಆರಂಭಿಸಿದ್ದಾರೆ.

    ಇದರಡಿ 75 ರೈಲ್ವೆ ತರಬೇತಿ ಸಂಸ್ಥೆಗಳ ಮೂಲಕ ಮೂರು ವರ್ಷಗಳಲ್ಲಿ 50,000 ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಆರಂಭದಲ್ಲಿ, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್ ಮತ್ತು ಫಿಟ್ಟರ್ ಎಂಬ ನಾಲ್ಕು ಟ್ರೇಡ್‍ಗಳಲ್ಲಿ 1,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ಆರಂಭದಲ್ಲಿ 100 ಗಂಟೆಗಳ ತರಬೇತಿಯನ್ನು ಒಳಗೊಂಡಿರುತ್ತದೆ.

    `ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು 10ನೇ ತರಗತಿಯಲ್ಲಿನ ಅಂಕಗಳ ಆಧಾರದ ಮೇಲೆ ಪಾರದರ್ಶಕ ಕಾರ್ಯವಿಧಾನವನ್ನು ಅನುಸರಿಸಿ, ಆನ್‍ಲೈನ್‍ನಲ್ಲಿ ಸ್ವೀಕರಿಸಿದ ಅರ್ಜಿಗಳಿಂದ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. 10 ನೇ ತರಗತಿ ಮತ್ತು 18-35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು’ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.

    300x250 AD

    `ಈ ಯೋಜನೆಯು ಯುವಜನರ ಉದ್ಯೋಗ ಸಾಮಥ್ರ್ಯವನ್ನು ಸುಧಾರಿಸುವುದಲ್ಲದೆ, ಸ್ವ- ಉದ್ಯೋಗಿಗಳ ಕೌಶಲ್ಯವನ್ನು ಮತ್ತು ಗುತ್ತಿಗೆದಾರರೊಂದಿಗೆ ಕೆಲಸ ಮಾಡುವವರ ಕೌಶಲ್ಯವನ್ನು ಸುಧಾರಿಸುತ್ತದೆ’ ಎಂದಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್ ಈ ಉಪಕ್ರಮವು ಯುವಜನರಿಗೆ ತಮ್ಮ ಕೆಲಸಗಳನ್ನು ಧನಾತ್ಮಕವಾಗಿ ಸುಧಾರಿಸಲು ವಿವಿಧ ವಹಿವಾಟುಗಳಲ್ಲಿ ತರಬೇತಿ ಕೌಶಲ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top