• first
    second
    third
    previous arrow
    next arrow
  • ಕರಾವಳಿ,ಮಲೆನಾಡು ಭಾಗಗಳಲ್ಲಿ ಸ್ಲೀಪರ್ ಸೆಲ್‌ಗಳಿಂದ ಸ್ಯಾಟಲೈಟ್ ಫೋನ್ ಬಳಕೆ

    300x250 AD

    ಭಟ್ಕಳ: ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಿಸಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಲೀಪರ್ ಸೆಲ್ ಗಳು ಮತ್ತೆ ಆಕ್ಟೀವ್ ಆಗಿವೆ ಎಂಬ ಮಾಹಿತಿ ದೊರೆತಿದೆ.

    ರಾಜ್ಯದ ನಾಲ್ಕು ಕಡೆಗಳಲ್ಲಿ ಕೇಂದ್ರ ಬೇಹುಗಾರಿಕಾ ಅಧಿಕಾರಿಗಳು ಸ್ಯಾಟಲೈಟ್ ಫೋನ್ ಇಂಟರ್ ಸೆಫ್ಟ್ ಮಾಡಿದ್ದವು. ಈ ವೇಳೆ ನಿಗೂಢ ವ್ಯಕ್ತಿಗಳು ಕರಾವಳಿ, ಮಲೆನಾಡು ಭಾಗದ ದಟ್ಟಾರಣ್ಯಗಳಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

    300x250 AD

    ಕರಾವಳಿ ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್ ಗಳು ಮತ್ತೆ ಆಕ್ಟೀವ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳ ಪ್ರಮುಖ ತಾಣಗಳಿಗೆ ಬಿಗಿ ಭದ್ರತೆ ಒದಗಿಸುವಂತೆ ಗುಪ್ತಚರ ಇಲಾಖೆ ಸೂಚಿಸಿದೆ. ಹಬ್ಬಗಳ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಹಾಗೂ ಸಮುದ್ರಗಳ ಮಧ್ಯೆ ನಡೆಯುವ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ ಎನ್ನಲಾಗಿದೆ.

    Share This
    300x250 AD
    300x250 AD
    300x250 AD
    Back to top