ಶಿರಸಿ: ಬಿ.ವಿ ಕಾರಂತರವರ ಜನ್ಮದಿನ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ(ರಿ.) ಮಂಚಿಕೇರಿ, ರಂಗಾಯಣ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಭಾರತೀಯ ರಂಗಸಂಗೀತ ದಿನವಾಗಿ ಸೆ.19 ರವಿವಾರ ಬೆಳಿಗ್ಗೆ 10 ಗಂಟೆಯಿಂದ ಶ್ರೀ ರಾಜರಾಜೇಶ್ವರಿ ಪ್ರೌಢಶಾಲಾ ಸಭಾಭವನದಲ್ಲಿ ‘ರಂಗಗೀತೆ ಗಾಯನ’ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರದ ಸಹಾಯಕ ನಿರ್ದೇಶಕ ಎನ್.ಜಿ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಈ ಸಂದರ್ಭದಲ್ಲಿ ಆರ್.ಎನ್ ಹೆಗಡೆ ಗೋರ್ಸಗದ್ದೆ ಉಪಸ್ಥಿತರಿರುವರು. ನಂತರ ನಡೆಯುವ ಗಾಯನ ಸಮಾರಂಭದಲ್ಲಿ ಗಾಯನದಲ್ಲಿ ನಾಗಭೂಷಣ ಹೆಗಡೆ ಬಾಳೆಹದ್ದ, ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್ ಇರಲಿದ್ದಾರೆ.