ದಾಂಡೇಲಿ: ಇಲ್ಲಿನ ವೆಸ್ಟ್ ಕೋಸ್ಟ್ ಕಾಗದ ಕಂಪನಿಯ ಕಾರ್ಮಿಕನೋರ್ವ ಶನಿವಾರ ಮುಂಜಾನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಂಗೂರ ನಗರ ನ್ಯೂ ಸ್ಟಾಪ್’ಕ್ವಾಟ್ರಸ್‍ನ ಸಾಂಬಾಜಿ ಎಂ ಕುಂಬಾರ ನೇಣು ಹಾಕಿಕೊಂಡ ವ್ಯಕ್ತಿಯಾಗಿದ್ದು, ಈತ ಕಾಗದ ಕಂಪನಿ ನೀರು ಸರಬರಾಜು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ದಾಂಡೇಲಿಯಿಂದ 4 ಕಿ.ಮೀ ದೂರದ ಮೋಹಿನಿ ಸರ್ಕಲ್ ಎಂಬ ಅರಣ್ಯ ಪ್ರದೇಶದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶರ್ಟ್ ಕಿಸೆಯಲ್ಲಿ ಉಳಿತಾಯ ಖಾತೆ ಪಾಸ್’ಬುಕ್ ಲಭ್ಯ, ಕಲಾಲ ಲೇವಾದೇವಿ, ಗಿರವಿ ವ್ಯಾಪಾರಸ್ಥರು ಬರೆಯಲಾದ ಪುಸ್ತಕ ದೊರೆತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.