ಅಂಕೋಲಾ: ಇಲ್ಲಿನ ವಂದಿಗೆ ಪಂಚಾಯತ್ ಹೊಸಗದ್ದೆ ಬೂತ್ ಅಧ್ಯಕ್ಷ ಸೋಮೇಶ್ವರ ಗೌಡ ಅವರ ಮನೆಯಲ್ಲಿ ಪಕ್ಷದ ಧ್ವಜಾರೋಹಣ ಮತ್ತು ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಪಾಲ್ಗೊಂಡರು.
ಸಚಿವರನ್ನು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಮಂಡಲ ಅಧ್ಯಕ್ಷ ಸಂಜಯ್ ನಾಯ್ಕ, ಭಾಸ್ಕರ ನಾರ್ವೆಕರ, ಜಗದೀಶ್ ನಾಯಕ್, ಪುರಸಭೆ ಉಪಾಧ್ಯಕ್ಷರಾದ ರೇಖಾ ಗಾಂವಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಇದ್ದರು.