ಕಾರವಾರ : ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆ ನಿಮಿತ್ತ ಬಿಜೆಪಿಯ ಕಾರವಾರ ನಗರ ಮಂಡಲ ಕಾರವಾರ ಟ್ಯಾಗೋರ್ ಕಡಲ ತೀರದಲ್ಲಿ ಮರಳಿನಿಂದ ಮೋದಿ ಅವರ ಭಾವಚಿತ್ರ ನಿರ್ಮಿಸಿ ಗಮನ ಸೆಳೆದರು. ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್ ನೇತೃತ್ವದಲ್ಲಿ ಅಂಕೋಲಾದ ಪ್ರಸಿದ್ಧ ಕಲಾಕಾರ ಪರಿಸರ ಸ್ನೇಹಿಯಾದ ಮರಳಿನಿಂದ ಮೋದಿಜಿಯವರ ಕಲಾಕೃತಿ ಅದ್ಭುತವಾಗಿ ಮೂಡಿಸಿದರು. ಸಾರ್ವಜನಿಕರು ಕಲಾಕೃತಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಡಾ.ನಿತಿನ್ ಪಿಕಳೆ, ಮಾಧ್ಯಮ ಸಂಚಾಲಕ ನಾಗರಾಜ್ ನಾಯಕ್, ಓಬಿಸಿ ರಾಜ್ಯ ಕಾರ್ಯಕಾರಣಿ ರಾಜೇಂದ್ರ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ನೈನಾ ನೀಲಾವರ್, ನಗರಸಭೆ ಉಪಾಧ್ಯಕ್ಷರಾದ ಪಿ ಪಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂಧ್ಯಾ ಬಾಡ್ಕರ್, ನಗರಸಭೆ ಸದಸ್ಯರು, ಪಕ್ಷದ ಮುಖಂಡರು, ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.
ಟ್ಯಾಗೋರ್ ಕಡಲತೀರದಲ್ಲಿ ಮರಳಿನ ಮೋದಿ ಚಿತ್ರ
