ಬೆಂಗಳೂರು: ಭಾರತೀಯ ಜನತಾ ಪಕ್ಷ ದೇವಾಲಯಗಳ ಪರವಾಗಿದ್ದು, ಯಾವುದೇ ದೇವಾಲಯಗಳನ್ನು ನೆಲಸಮ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿಜೆಪಿ ದೇವಸ್ಥಾನಗಳ ಸಂರಕ್ಷಣೆ, ಧರ್ಮ ಸಂರಕ್ಷಣೆಗಾಗಿ ಇರುವ ಪಕ್ಷ. ಕೆಡವಲಾದ ಎಲ್ಲಾ ದೇವಸ್ಥಾನಗಳನ್ನು ಪುನರ್‍ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನಗಳ ಸಂರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ದೇವಾಲಯಗಳನ್ನು ಉಳಿಸಲು ಕಾನೂನುಬದ್ಧವಾದ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೂ ಮಾತನಾಡಲಾಗುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ಕಾರ್ಯರೂಪಕ್ಕೆ ತಂದ ಅಧಿಕಾರಿಗಳ ಕ್ರಮ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ.