ಬೆಂಗಳೂರು: ಮಳೆ ನೀರಿನ ಸದ್ಬಳಕೆಗೆ ಸಂಬಂಧಿಸಿದಂತೆ ಈಗಿರುವ ಕಾನೂನನ್ನು ರಾಜ್ಯ ಸರ್ಕಾರ ಬಿಗಿಗೊಳಿಸಿದ್ದು, ಈ ಬಗ್ಗೆ ವಿಧೇಯಕವೊಂದು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
ಈ ಸಂಬಂಧ ಸಚಿವ ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ವಿದೇಯಕ ಮಂಡಿಸಿ, ಅದನ್ನು ಅಂಗೀಕರಿಸುವಂತೆ ಕೋರಿ ಸದನದ ಸಮ್ಮತಿ ಪಡೆದುಕೊಂಡರು.
ಈಗಾಗಲೇ ನಗರದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯವಾಗಿದೆ. ಆದರೆ ಬಹಳಷ್ಟು ಜನರು ಇದನ್ನು ನಿರ್ಮಿಸಿಕೊಂಡಿಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಅಭಾವವನ್ನು ತಪ್ಪಿಸುವ ದೃಷ್ಟಿಯಿಂದ, ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಅದಕ್ಕಿಂತ ಮೇಲ್ಪಟ್ಟು ನಿವೇಶನ ನಿರ್ಮಿಸಲಾದ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯವಾಗಿರಬೇಕು ಎಂದು ಈ ವಿಧೇಯಕ ತಿಳಿಸುತ್ತದೆ. ಹಾಗೆಯೇ 40*60 ಹಾಗೂ ಅದಕ್ಕಿಂತ ಮೇಲ್ಪಟ್ಟ ಸೈಟ್‍ಗಳಲ್ಲಿ ಎರಡು ಪೈಪ್‍ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ಪೈಪ್ ಸಂಗ್ರಹಣೆ ಮತ್ತು ಇನ್ನೊಂದು ಪೈಪ್ ಬಳಕೆಯ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ.
ಮಳೆ ನೀರಿನ ಸಮರ್ಪಕವಾದ ಬಳಕೆ, ಇಂಗಿಸುವಿಕೆಯ ದೃಷ್ಟಿಯಿಂದ ಈ ಮಹತ್ವದ ವಿಧೇಯಕವನ್ನು ಮಂಡಿಸಲಾಗಿದೆ.
ನ್ಯೂಸ್ 13