• Slide
    Slide
    Slide
    previous arrow
    next arrow
  • ಶ್ಯಾಂಪು ತುಂಬಿದ ಲಾರಿಗೆ ವಿದ್ಯುತ್ ಕಿಡಿ ಹಾರಿ ಬೆಂಕಿ ಅವಘಡ

    300x250 AD

    ಭಟ್ಕಳ: ಗುಜರಾತನಿಂದ ಕೊಚ್ಚಿಗೆ ಶ್ಯಾಂಪು ತುಂಬಿದ ರೈಲಿನಲ್ಲಿ ಸಾಗಿಸುತ್ತಿದ್ದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರನ ಕಿಡಿ ಹಾರಿ, ಅವಾಂತರವಾಗಿದೆ.


    ಸುರತ್ಕಲ್ 50 ಲಾರಿಗಳನ್ನು ತೆಗೆದುಕೊಂಡು ಹೊಗುತ್ತಿದ್ದ ರೈಲಿನಲ್ಲಿ ಗುಜರಾತ್ ನಿಂದ ಕೊಚ್ಚಿಗೆ ತೆರಳುತ್ತಿರುವ ಶಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರ್ ನಿಂದ ಕಿಡಿ ಹಾರಿ, ಬೆಂಕಿ ಕಾಣಿಸಿಕೊಂಡಿದೆ.

    300x250 AD


    ಈ ಬಗ್ಗೆ ಶಿರೂರು ರೇಲ್ವೆ ಸ್ಟೇಷನ್ ಮಾಸ್ಟರ್ ಸಂದೀಪ್ ಕುಮಾರ ಅವರು ನೀಡಿದ ಮಾಹಿತಿಯನಯ ಭಟ್ಕಳದ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಆಗುವ ಅನಾಹುತವನ್ನು ತಪ್ಪಿಸಲಾಗಿದೆ.


    ಭಟ್ಕಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್ ರಮೇಶ್ ಶೆಟ್ಟಿ, ಪ್ರಮುಖ ಅಗ್ನಿಶಾಮಕ ಮಹಮ್ಮದ್ ಶಫಿ, ಎಸ್. ಮೊಗಲ್, ಅಗ್ನಿ ಶಾಮಕ ಚಾಲಕ ಶಿವಪ್ರಸಾದ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top