ಶಿರಸಿ: ಟಿಎಸ್‍ಎಸ್ ನ ಮುಂಡಗೋಡ ಶಾಖೆಯಲ್ಲಿ ಇದೇ ಬರುವ ಅ.18 ರಿಂದ ಹಾಗೂ, ದಾಸನಕೊಪ್ಪದಲ್ಲಿ ಅ. 25 ರಿಂದ ಹಸಿ ಅಡಿಕೆಯ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವ್ಯವಸ್ಥೆಯ ಮೂಲಕ ರೈತರು ಸ್ಪರ್ಧಾತ್ಮಕ ದರದಲ್ಲಿ ಹಸಿಅಡಿಕೆಯನ್ನು(ಹಸಿರು ಅಡಿಕೆ ಹಾಗೂ ಗೋಟಡಿಕೆ) ಮಾರಾಟ ಮಾಡಬಹುದಾಗಿದೆ. ನಿಖರ ತೂಕ, ತ್ವರಿತ ಹಣಕಾಸಿನ ವ್ಯವಸ್ಥೆ ಹಾಗೂ ನ್ಯಾಯಯುತ, ಪಾರದರ್ಶಕ ಮತ್ತು ಗುಣಮಟ್ಟದ ವ್ಯವಹಾರಗಳ ಮೂಲಕ ರೈತರಿಗೆ ಈ ವ್ಯವಸ್ಥೆಯು ಅನುಕೂಲ ಕಲ್ಪಿಸಲಿದೆ.
ಹಾಗೆಯೇ, ಹಸಿ ಅಡಿಕೆಯನ್ನು ಖರೀದಿಸಲು ಇಚ್ಚಿಸುವ ವ್ಯಾಪಾರಸ್ಥರು ಸಹ ಸಂಘದ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ. 8088312312 ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.