ಶಿರಸಿ: ಶಿರಸಿ ಇಂಜಿನಿಯರ್ಸ ಹಾಗೂ ಆರ್ಕಿಟಕ್ಟ್ಸ ಅಸೋಸಿಯೇಶನ್ ಶಿರಸಿ ಜೀವಜಲಕಾರ್ಯಪಡೆ ನಡೆಸುತ್ತಿರುವ ನೆಲ ಜಲ ಸಂರಕ್ಷಣೆ, ಸ್ವಚ್ಚತಾ ಅಭಿಯಾನಕ್ಕೆ ತನ್ನ ಅಳಿಲು ಸೇವೆ ಕೂಡ ಸಲ್ಲಿಸಿ ಸಮಾಜಮುಖಿ ಸ್ಪಂದನೆ ನೀಡಿದೆ.ಅಸೋಸಿಯೇಷನ ನೂತನ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಅವರು 25 ಸಾವಿರ ರೂಪಾಯಿ ಮೊತ್ತದ ಚೆಕ್ ನೀಡುವ ಮೂಲಕ ಶ್ರೀನಿವಾಸ ಹೆಬ್ಬಾರ ಅವರ ನೇತೃತ್ವದ ಜೀವ ಜಲಕಾರ್ಯಪಡೆಗೆ ನೆರವು ನೀಡಿದರು.
ಜೀವಜಲ ಕಾರ್ಯಪಡೆಯ ನಿಸ್ವಾರ್ಥ ಸಮಾಜ ಸೇವೆಗೆ ಮೆಚ್ಚಿ ಈ ನೆರವು ನೀಡುತ್ರಿರುವದಾಗಿ ಶ್ಯಾಂಸುಂದರ ಭಟ್ಟ ತಿಳಿಸಿದರು.ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಚೆಕ್ ಸ್ವೀಕರಿಸಿ, ಸಮಾಜದ ಸೇವೆ ಎಂದರೆ ದೇವರ, ಸಮಾಜ ಧರ್ಮದ ಸೇವೆ. ಸಮಾಜ ನೀಡುವ ಶಕ್ತಿಯೇ ಅದರ ಆತ್ಮಬಲ. ಸಮಾಜದಲ್ಲಿ ಪ್ರಾಮಾಣಿಕ ಕಾರ್ಯಕ್ಕೆ ಜನ ಬೆಂಬಲ ಸಿಗುತ್ತದೆ ಎಂದರು.ಈ ವೇಳೆ ಇದ್ದ ಅನಿಲ ನಾಯಕ, ನಾನು ಇಂಜಿನಿಯರ ಅಸೋಸಿಯೇಶನ್ ಹಾಗೂ ಜೀವ ಜಲ ಕಾರ್ಯಪಡೆ ಈ ಎರಡರ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಎಂದರು.