ಶಿರಸಿ: ವರ್ಬೆಟಲ್ ಮೆನೇಜಿಂಗ ಟ್ರಸ್ಟೀ ದೀಪಕ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಬೆಟಲ್ 2021ರ ರಾಜ್ಯ ಮಟ್ಟದಆನ್ ಲೈನ್ ಚರ್ಚಾ ಸ್ಪರ್ಧೆಯಲ್ಲಿ ಚಂದನ ಶಾಲೆಯ ವಿದ್ಯಾರ್ಥಿಗಳಾದ ಪೂರ್ಣಚಂದ್ರ ಹೆಗಡೆ ಹಾಗೂ ಮೇಧಿನಿ ಭಟ್ ದ್ವಿತೀಯ ಸ್ಥಾನ ಪಡೆದು ತಲಾ 5 ಸಾವಿರ ರೂಪಾಯಿ ಹಾಗೂ ಪಾರಿತೋಷಕ ಪಡೆದಿದ್ದಾರೆ.
ರಾಜ್ಯದ ಎಲ್ಲಾ ಕಡೆಯಿಂದ ಒಟ್ಟೂ 150 ತಂಡಗಳು ಪಾಲ್ಗೊಂಡಿದ್ದವು. ಸೆಮಿಫೈನಲ್ ಹಂತದ 9 ತಂಡಗಳಲ್ಲಿ ಚಂದನ ಶಾಲೆಯ 3 ತಂಡಗಳು ಭಾಗವಹಿಸದ್ದವು. ರಾಜ್ಯಮಟ್ಟದ ಫೈನಲ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕರಾದ ಕಿರಣ ಭಟ್, ದಿವ್ಯಾ ಹೆಗಡೆ, ಸಿಂಧೂರ ಭಟ್, ಲಕ್ಷ್ಮೀ ಭಟ್, ಪೂರ್ಣಿಮಾ ಹೆಗಡೆ ಇವರಿಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ಮಕ್ಕಳು ಅಭಿನಂದಿಸಿದ್ದಾರೆ. ವರ್ಬೆಟಲ್ ಚರ್ಚಾ ಸ್ಪರ್ಧೆಯಲ್ಲಿ 6 ನೇ ಬಾರಿಗೆ ಚಂದನ ಶಾಲೆಯ ವಿದ್ಯಾರ್ಥಿಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆದಿರುವುದು ಸಾಧನೆ ಮಾಡಿರುವುದು ಗಮನಾರ್ಹ.