ಶಿರಸಿ: ಟಾಟಾ ಕನ್ಸಲ್ಟನ್ಸಿ ಸರ್ವಿಸ್, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಸಂವಹನ ತಂತ್ರಜ್ಞಾನ ಜಾಗೃತಿಯ ಕುರಿತಾಗಿ ನಡೆಸುವ ಗ್ರಾಮೀಣ ಐ ಟಿ ಕ್ವಿಜ್ ಸ್ಪರ್ಧೇಯಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ 8 ನೇ ವರ್ಗದ ವಿದ್ಯಾರ್ಥಿಗಳಾದ ಆದರ್ಶ ಭಟ್ ಮತ್ತು ಶ್ರೇಯಸ್ ಮಂಗಳೂರು ಇವರು ಜಿಲ್ಲಾ ಮಟ್ಟದಲ್ಲಿ ಭಾವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹರ್ಷ ವ್ಯಕ್ತ ಪಡಿಸಿ ವಿಭಾಗ ಮಟ್ಟಕ್ಕೆ ಶುಭ ಹಾರೈಸಿದ್ದಾರೆ.