ಹೊನ್ನಾವರ: ಪದ್ಮಶ್ರೀ ಪುರಸ್ಕೃತ ದಿ.ರಾಮಚಂದ್ರ ಹೆಗಡೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಹೊಸಾಕುಳಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸೆ.18 ಶನಿವಾರ ಸಂಜೆ 5.30ಕ್ಕೆ ‘ಪದ್ಮಶ್ರೀ ಚಿಟ್ಟಾಣಿ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಬಾರಿ ಕಪ್ಪೆಕೇರಿ ಸುಬ್ರಾಯ ಭಾಗವತರಿಗೆ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅತಿಥಿಗಳಾಗಿ ವೇ.ಮೂ.ಶ್ರೀ ಶಿವರಾಮ ಭಟ್ಟ ಅಲೇಖ, ಶಾಸಕರಾದ ದಿನಕರ ಶೆಟ್ಟಿ, ಸುನಿಲ್ ನಾಯ್ಕ, ಪ್ರಮೋದ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಕೆ.ಸುರೇಶ, ಸತ್ಯನಾರಾಯಣ ಭಟ್ಟ, ಪತ್ರಕರ್ತ ಜಿ.ಯು ಭಟ್ಟ, ಹೊನ್ನಾವರ, ಎಸ್.ಆರ್.ಎಲ್ ಗ್ರೂಪ್ ಮಾಲಕ ವೆಂಕಟ್ರಮಣ ಹೆಗಡೆ, ಶ್ರೀಕ್ಷೇತ್ರ ಬಂಗಾರಮಕ್ಕಿ ರಾಮಚಂದ್ರ ಭಟ್ಟ, ನ್ಯಾಯವಾದಿ ಸತೀಶ ಭಟ್ಟ ಉಳ್ಗೆರೆ, ಮಾಜಿ ಜಿ.ಪಂ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಚಿಟ್ಟಾಣಿ, ನವಿಲಗೋಣ ಗಣೇಶಮೂರ್ತಿ, ವಿ.ದತ್ತಮೂರ್ತಿ ಭಟ್ಟ, ಸಿ.ಜಿ ಹೆಗಡೆ ಯಲ್ಲಾಪುರ, ಹಿರಿಯ ಕಲಾಸಾಹಿತಿ ಎಚ್.ಜನಾರ್ಧನ ಹಂದೆ, ವೇ.ಮೂ ರಾಧಾಕೃಷ್ಣ ಭಟ್ಟ ಅಲೇಖ, ಜಿ.ಎಸ್ ಹೆಗಡೆ ಗೊಟ್ಟಕೋಡ್ಲು, ಹೊಸಾಕುಳಿ ಗ್ರಾ.ಪಂ ಅಧ್ಯಕ್ಷ ನಾಗರತ್ನ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ, ಸುಬ್ರಾಯ ಹೆಗಡೆ ಸಾಣ್ಮನೆ, ರಾಘವೇಂದ್ರ ಭಟ್ಟ ಯಲ್ಲಾಪುರ, ಸುಪ್ರತೀಕ ಭಟ್ಟ ನೀರ್ಗಾನು, ನಾರಾಯಣ ಭಟ್ಟ ಮೇಲಿನಗಂಟಿಗೆ ಉಪಸ್ಥಿತರಿರುವರು.