• Slide
    Slide
    Slide
    previous arrow
    next arrow
  • ಸೆ.18 ರಿಂದ ಸ್ವದೇಶಿ ಉತ್ಪನ್ನ ಪ್ರದರ್ಶನ- ಮಾರಾಟ

    300x250 AD

    ಶಿರಸಿ: ರೈತರು ಕುಶಲಕರ್ಮಿಗಳು ಹಾಗೂ ಸಣ್ಣ ಕೈಗಾರಿಕೆಗಳ ಕಾರ್ಮಿಕರು ಕೊವಿಡ್’ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಪುನಶ್ಚೇತನಕ್ಕಾಗಿ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಶಿರಸಿಯ ಟಿಎಸ್‍ಎಸ್ ನಲ್ಲಿ ಸೆಪ್ಟೆಂಬರ್ 18 ರಿಂದ 21ರವರೆಗೆ ನಡೆಯಲಿದೆ ಎಂದು ‘ಚರಕ ಪವಿತ್ರ ವಸ್ತ್ರ ಅಭಿಯಾನ’ದ ಸಾಮಾಜಿಕ ಕಾರ್ಯದರ್ಶಿ ಮಹಾಲಕ್ಷ್ಮಿ ಹೇಳಿದರು.

    ಅವರು ನಗರದ ಸಾಮ್ರಾಟ್ ಅತಿಥಿ ಗೃಹದಲ್ಲಿ ಪತ್ರಿಕಾಗೊಷ್ಠಿ ನಡೆಸಿ ವಿವರಿಸಿ ಜನ ಸಾಮಾನ್ಯರು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಬೇಕು. ಯಂತ್ರದಿಂದ ತಯಾರಾಗುವ ಬಟ್ಟೆಗಳನ್ನೂ ಕೈ ಮಗ್ಗದ ಬಟ್ಟೆ ಎಂದು ಗ್ರಾಹಕರಿಗೆ ನೀಡುತ್ತಿದ್ದಾರೆ. ಕಲಬರಕೆ ವಿರುದ್ಧ ಈ ಚಳುವಳಿ ಸಂಘಟಿಸಲಾಗಿದೆ. ಕೈ ಮಗ್ಗದ ಬಟ್ಟೆ ಗಳನ್ನು ಧರಿಸುವವರನ್ನೇ ಈ ಬಾರಿ ರೂಪದರ್ಶಿಗಳನ್ನಾಗಿ ಮಾಡಲಾಗುತ್ತಿದೆ. ಚರಕ ಸಂಸ್ಥೆಯ ಜೊತೆ ಹದಿನೈದಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಲಿದೆ. ಆಕರ್ಷಕ ವಿನ್ಯಾಸದ 152 ಬಗೆಯ ಖಾದಿ ವಸ್ತ್ರಗಳು ಮಾರಟಕ್ಕಿರಲಿದೆ. ಖರ್ಚಿಫ್’ನಿಂದ ಹಿಡಿದು ಸೀರೆ, ಚೂಡಿದಾರದ ತನಕ ಬಟ್ಟೆ ಮಾರಾಟ ಮಾಡಲಾಗುತ್ತದೆ.

    ಸೆ.21ರ ಸಂಜೆ 4.30 ಕ್ಕೆ ನೆಮ್ಮದಿಯಲ್ಲಿ ದೇಸೀ ಸಂವಾದ ನಡೆಯಲಿದ್ದು, ಚರಕದ ಸಂಸ್ಥಾಪಕ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ ಎಂದರು.

    300x250 AD

    ಈ ಕಾರ್ಯಕ್ರಮ ವನ್ನು ಟಿಆರ್‍ಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆಯವರು ಉದ್ಘಾಟನೆ ಮಾಡಲಿದ್ದಾರೆ.
    ಅಂದು ನಮ್ಮಲ್ಲಿ ಹುಲ್ಲಿನಿಂದ ಮಾಡಿದ ಬುಟ್ಟಿಗಳು , ಚರಕ ದ ಎಲ್ಲಾ ಉತ್ಪನ್ನ ಗಳು , ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳು ಸೇರಿ ಕೈ ಮಗ್ಗದ ಉಪಕರಣಗಳು ಲಭ್ಯ ವಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಚರಕ ಮಹಿಳಾ ವಿವಿದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಮ್ಮ, ಸದಸ್ಯೆ ಮಧುರ, ಸ್ಥಳೀಯರಾದ ಶ್ರೀಪಾದ ಭಟ್ ಹಾಗೂ ಟಿಎಸ್‍ಎಸ್ ನ ವಿನಾಯಕ ಭಟ್ ಉಪಸ್ಥಿತರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top