ಯಲ್ಲಾಪುರ : ತಾಲೂಕಿನ ತುಡುಗುಣಿಯಲ್ಲಿ ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು ಕೊಲೆಯಾದವರನ್ನು ಸರೋಜಿನಿ ನಾಯರ (೪೫) ಎಂದು ಗುರುತಿಸಲಾಗಿದೆ. ಸರೋಜಿನಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಮನೆಯಲ್ಲಿ ಅವರು ತಾಯಿ, ತಂಗಿ, ಹಾಗೂ ತಂಗಿಯ ಮಗನ ಜೊತೆ ಇರುತ್ತಿದ್ದರು. ಅವರ ತಂಗಿಯನ್ನು ಗುರಿಯಾಗಿಸಿಕೊಂಡು ಬಂದಿದ್ದ ಕೊಲೆಗಾರ, ಅವರ ತಂಗಿ ಬೆಳಿಗ್ಗೆಯೇ ಎಲ್ಲಿಯೋ ಹೋಗಿದ್ದರು . ಇವರ ಮನೆಗೆ ಬಂದ ಆರೋಪಿ ತಂಗಿ ಇಲ್ಲದ್ದನ್ನು ನೋಡಿದ್ದು, ಸರೋಜಿನಿ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ.ಸಿಟ್ಟಿಗೆದ್ದ ಆರೋಪಿ ಈಕೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ನಂತರ ತಂಗಿಯ ಮಗನನ್ನು ಚಾಕು ಹಿಡಿದು ಹೆದರಿಸಿ ತನ್ನ ಜೊತೆ ಕರೆದೊಯ್ದಿದ್ದಾನೆ ಎಂದು ಗೊತ್ತಾಗಿದೆ.
ತಂಗಿ ಹುಡುಕಿ ಬಂದವ ಅಕ್ಕನನ್ನು ಕೊಲೆಗೈಯ್ದು ಹೋದ ! ತುಡುಗುಣಿಯಲ್ಲೊಂದು ಹೃದಯ ವಿದ್ರಾವಕ ಘಟನೆ
