ಮುಂಡಗೋಡ: ಹಂಗಾಮಿ ಲಾಗಣಿ ನಾತೆಯಿಂದ ಕೃಷಿ ಉದ್ದೇಶಕ್ಕೆ ಅರಣ್ಯ ಭೂಮಿ ಸಾಗುವಳಿಗೆ ನೀಡಿ 50 ವರ್ಷಗಳಾದರೂ ಇಂದಿಗೂ ರೈತರಿಗೆ ಖಾಯಂ ಲಾಗಣಿ ಹಕ್ಕು ನೀಡದೆ ಭೂಮಿ ಹಕ್ಕು ಹಂಗಾಮಿ ಲಾಗಣಿದಾರರಿಗೆ ಮರಿಚಿಕೆ ಆಗಿದೆ. ಖಾಯಂ ಭೂಮಿ ಹಕ್ಕು ಅತೀ ಶೀಘ್ರದಲ್ಲಿ ನೀಡುವಂತೆ ಹಂಗಾಮಿ ಲಾಗಣಿದಾರರಿಂದ ಜಿಲ್ಲಾದ್ಯಂತ ಕೇಳಿಬರುತ್ತಿದೆ.
ಅರಣ್ಯ ಸಂರಕ್ಷಣಾ ಕಾಯಿದೆ ಪೂರ್ವದಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ 6156 ಕುಟುಂಬಗಳಿಗೆ ವ್ಯವಸಾಯ ಉದ್ದೇಶಕ್ಕಾಗಿ 19,529.24 ಸಾವಿರ ಎಕ್ರೆ ಪ್ರದೇಶವನ್ನು ಹಂಗಾಮಿ ಲಾಗಣಿ ನಾತೆಯಿಂದ ಕೃಷಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿತ್ತು. ರಾಜ್ಯ ಸರ್ಕಾರವು ಸಾಕಷ್ಟು ಸಾರೇ ಆದೇಶದ ಅನ್ವಯ ಹಂಗಾಮಿ ಲಾಗಣಿ ವ್ಯವಸಾಯ ಭೂಮಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮದಡಿಯಲ್ಲಿ ಖಾಯಂಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಿದ್ದಾಗ್ಯೂ, ಕೇವಲ 2029 ಪ್ರಕರಣಗಳಿಗೆ ಮಾತ್ರ ಖಾಯಂ ಮಂಜೂರಿ ಆದೇಶ ನೀಡಿ ಅಂತಹ ಸಾಗುವಳಿದಾರರ ಹೆಸರನ್ನು ಪಹಣಿಪತ್ರಿಕೆಯಲ್ಲಿ ಖಾಯಂ ಲಾಗಣಿದಾರರು ಎಂದು ದಾಖಲಾಗಲ್ಪಟ್ಟಿದೆ. ಇನ್ನುಳಿದಂತ ಹಂಗಾಮಿ ಸಾಗುವಳಿದಾರರು ಖಾಯಂ ಸಾಗುವಳಿಯ ಭೂಮಿ ಹಕ್ಕಿನ ಪ್ರಕ್ರೀಯೆಗೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಹಾಗೂ ಕಾನೂನು ಬಾಹಿರ ತಕರಾರುಗಳಿಂದ ಖಾಯಂ ಹಕ್ಕಿನಿಂದ ವಂಚಿತರಾಗಿದ್ದಾರೆ ಖಾಯಂ ಲಾಗಣಿ ಭೂಮಿ ಹಕ್ಕುದಾರರಿಗೂ ವಾರಸ ದಾಖಲೆಗೆ ಡಿಸ್‍ಫಾರೆಸ್ಟ ಆದೇಶಕ್ಕೆ ಕಂದಾಯ ಇಲಾಖೆ ಆಗ್ರಹಿಸುತ್ತಿದೆ.
ಹಂಗಾಮಿ ಭೂಮಿ ಖಾಯಂ ಮಂಜೂರಿಗೆ ಸರಕಾರ ಅಂತಿಮ ಆದೇಶ ನೀಡಿ 27 ವರ್ಷವಾದರೂ ಅರಣ್ಯ ಇಲಾಖೆಯ ವಿನಾಃ ಕಾರಣ ಹಸ್ತಕ್ಷೇಪದಿಂದ ಭೂಮಿ ಹಕ್ಕನಿಂದ ವಂಚಿತರಾಗುತ್ತಿದ್ದಾರೆ ಅಲ್ಲದೇ ಪೂರ್ಣಪ್ರಮಾಣದ ಖಾಯಂ ಲಾಗಣಿ ಆಗದೇ ಇರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಡಿಸ್‍ಫಾರೆಸ್ಟ ಆದೇಶ ತನ್ನಿ:
ಹಂಗಾಮಿ ಲಾಗಣಿ ನೀಡಿದ ಭೂಮಿಗೆ ಸಂಬಂಧಿಸಿ ಡಿಸ್‍ಫಾರೆಸ್ಟ ಆಗಿರುವ ದಾಖಲೆ ನೀಡಿದ್ದಲ್ಲಿ `ಭೂಮಿ ಹಕ್ಕು ಪತ್ರ’ ನೀಡಲಾಗುವುದೆಂದು ಕಂದಾಯ ಅಧಿಕಾರಿಗಳು ಹಂಗಾಮಿ ಲಾಗಣಿದಾರರಿಗೆ ಹೇಳುವುದರಿಂದ ಲಾಗಣಿದಾರರು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಅಲ್ಲದೇ, ಕಬಲಾಯತ್ ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು ಖಾರ್ಯ ಲಾಗಣಿಗೆ ಮಂಜೂರಿ ಆದೇಶ ನೀಡಿ 25 ವರ್ಷಗಳ ನಂತರ ಇಂದು ಡಿಸ್‍ಫಾರೆಸ್ಟ ಆದೇಶ ಕೇಳುತ್ತಿರುವುದು ಆಶ್ಚರ್ಯಕರ ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು