ಕಾರವಾರ : ಕೈಗಾ ಅಣು ವಿದ್ಯುತ್ ಸ್ಥಾವರದ 5-6 ನೇ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಜಿಲ್ಲೆಯ ಎಲ್ಲ ಶಾಸಕರು ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಕಾರವಾರ ಬಿಜೆಪಿ ಗ್ರಾಮೀಣ ಘಟಕದ ಕಾರ್ಯದರ್ಶಿ ಘನಶ್ಯಾಮ ಬಾಂದೇಕರ ಆಗ್ರಹ ಮಾಡಿದ್ದಾರೆ.ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಹಿಂದೆಟು ಹಾಕುತ್ತಿದ್ದಾರೆ. ಈ ಸಮಸ್ಯೆ ನಿವಾರಣೆ ಆಗಬೇಕಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರವು ಈಡೀ ದೇಶಕ್ಕೆ ವಿದ್ಯುತ್ ಸಂಪರ್ಕ ನೀಡುವ ಸ್ಥಾವರವಾಗಿದೆ. ಈಗ ಅಲ್ಲಿ 5 ಮತ್ತು 6 ನೇ ಘಟಕವು ಪ್ರಾರಂಭವಾಗಿದ್ದು, ಈ ಅಣು ವಿದ್ಯುತ್ ಸ್ಥಾವರಕ್ಕೆ ಜಮೀನು ನೀಡಿದ ಕೆಲವು ನಿರಾಶ್ರಿತರಿಗೆ ಈವರೆಗೆ ನೌಕರಿ ಲಭ್ಯವಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾವಂತರು ತಮ್ಮ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಅನೇಕರು ಬೇರೆ ಕಡೆಗೆ ನೌಕರಿಗಾಗಿ ತೆರಳುತ್ತಿದ್ದಾರೆ.ವಿದ್ಯಾವಂತರಿಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನೌಕರಿ ಸಿಗುವಂತಾಗಬೇಕು. ಕೈಗಾ ಅಣು ವಿದ್ಯುತ್ ಸ್ಥಾವರದ 5- 6 ನೇ ಘಟಕದಲ್ಲಿ ಹೆಚ್ಚಿನ ಆದ್ಯತೆ ಸ್ಥಳೀಯರಿಗೆ ಲಭ್ಯವಾಗುವಂತೆ ಮಾಡಬೇಕು ಅವರಿಗೆ ಹೆಚ್ಚು ಉದ್ಯೋಗ ಸಿಗುವಂತೆ ಆಗಬೇಕು ಎಂದು ಬಿಜೆಪಿ ಗ್ರಾಮೀಣ ಘಟಕದ ಕಾರ್ಯದರ್ಶಿ ಘನಶ್ಯಾಮ ಬಾಂದೇಕರ ಆಗ್ರಹಿಸಿದ್ದಾರೆ.
ಕೈಗಾ ಸ್ಥಾವರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ
