ಶಿರಸಿ: ತಾಲೂಕಿನ ಬನವಾಸಿಯ ಅರವಿಂದ ಶೆಟ್ಟಿ ಕುಟುಂಬವೊಂದು ಆಕಳ ಕರುವನ್ನು ತೊಟ್ಟಿಲಿಗೆ ಹಾಕಿ ತೂಗಿ ನಾಮಕರಣ ಮಾಡುವ ಮೂಲಕ ಗೋ ಪ್ರೇಮ ತೋರಿದ್ದಾರೆ.
ಹೌದು..ವಿಭಿನ್ನ ರೀತಿಯಲ್ಲಿ ತಮ್ಮ ಗೋ ಪ್ರೀತಿಯನ್ನು ಅವರು ತೋರಿದ್ದಾರೆ. ಎಲ್ಲ ಕಡೆ ಪುಟ್ಟ ಮಕ್ಕಳನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಶಾಸ್ತ್ರ ಮಾಡುವುದನ್ನು ನಾವು ನೋಡೊದ್ದೇವೆ. ಆದರೆ ಇವರು ವಿಭಿನ್ನ ರೀತಿಯಾಗಿ ಆಕಳ ಕರುವನ್ನು ತೊಟ್ಟಿಲಿಗೆ ಹಾಕಿ ತೂಗಿ ತೊಟ್ಟಿಲ ಶಾಸ್ತ್ರ ನೆರವೇರಿಸಲಾಗಿದೆ. ಮನೆಯ ಹಸುವೊಂದು ಮೂರನೇ ಕರುವಿಗೆ ಜನ್ಮನೀಡಿದ ಸಂಭ್ರಮ. ಅದಕ್ಕೆ ಗಿರಿಯಮ್ಮ ಎಂದು ಹೆಸರಿಡುವುದರ ಜತೆ ಅದಕ್ಕೆ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ.
ತೊಟ್ಟಿಲಲ್ಲಿ ಆಕಳ ಕರುವನ್ನು ಕೂರಿಸಿ ಮನೆಮಂದಿಯೆಲ್ಲ ತೂಗಿ ಸಂಭ್ರಮಿಸಿದರು. ಈ ತೊಟ್ಟಿಲು ಶಾಸ್ತ್ರ ನೋಡೋಕೆ ಗ್ರಾಮಸ್ಥರು ಕೂಡಾ ಆಗಮಿಸಿದ್ದರು. ಇವರ ಗೋ ಪ್ರೇಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.