ಯಲ್ಲಾಪುರ : ಎಮ್ಮೆಯನ್ನು ಹಳ್ಳ ದಾಟಿಸುತ್ತಿದ್ದದನಗಾಯಿಯೋರ್ವ ಕಾಲು ಜಾರಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಕಾಳಿನದಿ ಕಾರ್ಕುಂಡಿ ಬಳಿ ನಡೆದಿದೆ. ಮೇಯಲು ಬಿಟ್ಟ ಎಮ್ಮೆಗಳನ್ನು ಹಳ್ಳ ದಾಟಿಸುವಾಗ ಆಕಸ್ಮಿಕವಾಗಿ ಕಲ್ಲಿನ ಮೇಲೆ ಕಾಲು ಜಾರಿ ಬಿದ್ದ ಕಿರವತ್ತಿ ಸಮೀಪದ ಬೊಮ್ಮಡಿಕೊಪ್ಪ ಕಂಚಳ್ಳಿ ನಿವಾಸಿ ನಾವ್ರ ಪಟಗಾರೆ (27) ಹಳ್ಳದಲ್ಲಿ ಕೊಚ್ಚಿ ಹೋಗಿದ್ದನು. ಆತ ಮುಳುಗಿದ ಸ್ಥಳದಿಂದ 150 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
ಜಾನುವಾರು ದಾಟಿಸುತ್ತಿದ್ದವ ಹಳ್ಳಕ್ಕೆ ಬಿದ್ದು ಸಾವು
