ಯಲ್ಲಾಪುರ: ಮಾವಿನಮನೆ ಗ್ರಾಮದ ಅಶ್ವಿನಿ ಹೆಗಡೆ 2021 ನೇ ಸಾಲಿನ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆರಂಭದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅಶ್ವಿನಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಗಿನಕಟ್ಟಾದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಪಡೆದು ಯಲ್ಲಾಪುರದಲ್ಲಿ ಬಿ.ಕಾಂ ಶಿಕ್ಷಣ ಪೂರೈಸಿದ್ದಾಳೆ.
ಕಣ್ಣಿಪಾಲ್ ಕುಟುಂಬದ ಶ್ರೀಪಾದ ಹೆಗಡೆ ಹಾಗೂ ಕಾವೇರಿ ಇವರ ಪುತ್ರಿಯಾದ ಅಶ್ವಿನಿ ಹೆಗಡೆ ಹರಣಗದ್ದೆಯ ಸತೀಶ ಹೆಬ್ಬಾರ ಇವರ ಧರ್ಮಪತ್ನಿ.
ಬೆಂಗಳೂರಿನ ವಿದ್ಯಾ ಕೆ & ಕಂ. ನಲ್ಲಿ ಸಿ.ಎ.ಆರ್ಟಿಕಲ್ ಶಿಪ್ ಮಾಡಿದ ಅಶ್ವಿನಿ ತಾಳ್ಮೆಯಿಂದ ಕೂಡಿದ ನಿರಂತರ ಪ್ರಯತ್ನ ಪರೀಕ್ಷೆಯಲ್ಲಿ ಯಶ ಸಾಧಿಸಲು ನೆರವಾಯಿತು ಅನ್ನುತ್ತಾರೆ. ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು , ಸಹಕರಿಸಿದ ಎಲ್ಲರನ್ನು ಸ್ಮರಿಸಿದ್ದಾಳೆ.