ಶಿರಸಿ: ನಗರದ ನಯನಾ ಫೌಂಡೇಶನ್‍ನ ಲಯನ್ಸ್ ನಯನ ನೇತ್ರ ಭಂಡಾರ ಹಾಗೂ ಗಣೇಶ ನೇತ್ರಾಲಯ ಆಶ್ರಯದಲ್ಲಿ ನೇತ್ರದಾನದ ಮಹತ್ವ, ಮಾಹಿತಿ ಹಾಗೂ ತಿಳಿವಳಿಕೆ ಕಾರ್ಯಕ್ರಮ ನಡೆಯಿತು.
ಮನುವಿಕಾಸ ಸಂಸ್ಥೆಯ ಮಹಿಳಾ ಸ್ವ-ಸಹಾಯ ಸಂಘದ ವಾರ್ಷಿಕ ಸಭೆಯಲ್ಲಿ, ಭೈರುಂಬೆಯ ಕಲರವ' ಟ್ರಸ್ಟ್‌ನ ಸ್ವಯಂ ಸೇವಕರಿಗೆ, ಶಿರಸಿಯ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಗಳಿಗೆ, ಲಯನ್ಸ್ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವ ವಾರಾಂತ್ಯದ
ಲೋಚನ’ ಆನ್ಲೈನ್ ಕಾರ್ಯಕ್ರಮದಲ್ಲಿ ನೇತ್ರದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ಅರಿವು ನೀಡಲಾಯಿತು. ಗಣೇಶ ನೇತ್ರಾಲಯದ ಸಾಗರ ಶಾಖೆಯಲ್ಲಿ ಬೆಂಗಳೂರಿನ `ನಯನ ಜ್ಯೋತಿ ಟ್ರಸ್ಟ್’ ನ ಮುಖ್ಯಸ್ಥ ಜಯರಾಮ್ ಅವರ ಸಹಯೋಗದೊಂದಿಗೆ ನೇತ್ರದಾನದ ಜಾಗೃತಿಯ ಭಿತ್ತಿಪತ್ರಗಳನ್ನು ಜನರಿಗೆ ವಿತರಿಸಲಾಯಿತು ಹಾಗೂ ಅಂತರ್ಜಾಲದ ಮೂಲಕ ನೇತ್ರದಾನ ಶಪಥದ ಬಗ್ಗೆ ತಿಳಿಸಲಾಯಿತು.
ಸುಳ್ಯದ ಕೆ. ವಿ. ಜಿ. ಮೆಡಿಕಲ್ ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಅಂತರ್ಜಾಲದ ಮೂಲಕ ನೇತ್ರದಾನದ ಅರಿವು-ಜಾಗೃತಿ ಕಾರ್ಯಕ್ರಮ ನಡೆಯಿತು. ಅದರಂತೆ ಲಯನ್ಸ್ ನಯನ ನೇತ್ರ ಭಂಡಾರದ ಜತೆ ನಯನಾ ಫೌಂಡೇಶನ್, ರೋಟರಿ ಡಿಸ್ಟ್ರಿಕ್ಟ್ 3170, ಲಯನ್ಸ್ ಡಿಸ್ಟ್ರಿಕ್ಟ್ 317ಬಿ, ಶಿರಸಿಯ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ಶಿರಸಿ ಐ. ಎಂ. ಎ. ಸಹಭಾಗಿತ್ವದಲ್ಲಿ ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ದೃಷ್ಟಿಯ ವರದಾನವನ್ನು ಮರಣದ ನಂತರ ನೇತ್ರದಾನದ ಮೂಲಕ ಅಗತ್ಯ ಇರುವವರಿಗೆ ನೀಡುವಂತಹ ಮಹತ್ಕಾರ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ನೇತ್ರತಜ್ಞ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಡಾ. ಚಂದ್ರಶೇಖರ ಶೆಟ್ಟಿ ಗೌರವ ಅತಿಥಿಗಳಾಗಿ ಹಾಗೂ ರೋಟರಿ ಡಿಸ್ಟ್ರಿಕ್ಟ್ 3170ದ ಗವರ್ನರ್ ರೊಟೇರಿಯನ್ ಗೌರೀಶ ದೊಂಡ, ಲಯನ್ಸ್ ಡಿಸ್ಟ್ರಿಕ್ಟ್ 317ಬಿ ಗವರ್ನರ್ ಎಂಜೆಎಫ್ ಲಯನ್ ಶ್ರೀಕಾಂತ ಮೋರೆ ಅತಿಥಿಗಳಾಗಿ ಭಾಗವಹಿಸಿದ್ದರು. ರೋಟರಿ ಮತ್ತು ಲಯನ್ಸ್ ಜಿಲ್ಲೆಗಳ ಅನೇಕ ಪದಾಧಿಕಾರಿಗಳು ಅಂತರ್ಜಾಲದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು