• Slide
  Slide
  Slide
  previous arrow
  next arrow
 • ಸೆ.17ಕ್ಕೆ ಲಸಿಕಾ ಮಹಾಮೇಳದ ಪ್ರಯೋಜನ ಪಡೆಯಿರಿ; ಎಸಿ ರಾಹುಲ್ ಪಾಂಡೆ

  300x250 AD

  ಕುಮಟಾ: ಸರ್ಕಾರದ ನಿರ್ದೇಶನದಂತೆ ಸೆ.17 ರಂದು ಲಸಿಕಾ ಮಹಾಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಪ್ರಯೋಜನ ಪಡೆದುಕೊಳ್ಳುಬೇಕು ಎಂದು ಸಹಾಯಕ ಆಯುಕ್ತ ರಾಹುಲ್ ರತ್ನಂ ಪಾಂಡೆ ಹೇಳಿದರು.

  ತಾಲೂಕು ಸಹಾಯಕ ಆಯುಕ್ತರ ಕಛೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರು ಹಾಗೂ ಎರಡನೇ ಲಸಿಕೆ ಪಡೆಯಲು ಅವಧಿ ಪೂರೈಸಿರುವ ಎಲ್ಲರೂ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ ಗೊಳಿಸಲಾಗಿದೆ. ಈ ಪ್ರಯುಕ್ತ ಕುಮಟಾ ತಾಲೂಕಿನ ಒಟ್ಟು 36 ಕೇಂದ್ರಗಳಲ್ಲಿ ಹಾಗೂ ಅಂಕೋಲಾ ತಾಲೂಕಿನ 24 ಕೇಂದ್ರಗಳಲ್ಲಿ ಲಸಿಕಾಕರಣ ನಡೆಯಲಿದೆ. ದಿ 17 ರಂದು ಬೆಳಿಗ್ಗೆ 9.30 ಗಂಟೆಯಿಂದ ಮದ್ಯಾಹ್ನ 4 ಗಂಟೆವರೆಗೆ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಲರು ಲಸಿಕೆ ಪಡೆದು ಕೊಳ್ಳಬೇಕು ಎಂದು ವಿನಂತಿಸಿದರು.

  300x250 AD

  ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ಮಾತನಾಡಿ, ಈ ವರೆಗೆ ಕೋವಿಡ್ ಲಸಿಕೆ ಪಡೆದುಕೊಳ್ಳದೇ ಇದ್ದಂತವರು ಈ ಮಹಾಮೇಳದಲ್ಲಿ ಭಾಗವಹಿಸಿ ಲಸಿಕೆ ಪಡೆದುಕೊಳ್ಳಬೇಕು. ಪ್ರಥಮ ಹಾಗೂ ದ್ವಿತಿಯ ಡೋಸ್ ಗಳನ್ನು ಮಹಾಮೇಳದಲ್ಲಿ ನೀಡಲಾಗುತ್ತಿದ್ದು, ಪ್ರಮುಖವಾಗಿ ಯುವ ಜನತೆ ಕೋವಿಡ್ ವಿರುದ್ದದ ಈ ಹೋರಾಟದಲ್ಲಿ ಹೆಚ್ಚಾಗಿ ಕೈಜೋಡಿಸುವಂತಾಗಬೇಕು. ಕೋವಿಡ್ ಲಸಿಕೆಯ ಕುರಿತಾದ ಊಹಾಪೆÇೀಹಗಳಿಗೆ ಕಿವಿಗೊಡದೆ ಶೇ. 100 ರಷ್ಟು ಲಸಿಕಾಕರಣ ಆಗುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾದದ್ದು “ಎಂದು ಅಭಿಪ್ರಾಯಪಟ್ಟರು.

  ಈ ಸಂದರ್ಭದಲ್ಲಿ ತಹಶಿಲ್ದಾರ ವಿವೇಕ ಶೇಣ್ವಿ, ಗ್ರೇಡ್-2 ತಹಶೀಲ್ದಾರ್ ಅಶೋಕ ಭಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು

  Share This
  300x250 AD
  300x250 AD
  300x250 AD
  Leaderboard Ad
  Back to top