ಶಿರಸಿ: ರಾಜ್ಯಾದ್ಯಂತ ಸೆ.17 ಶುಕ್ರವಾರ ಕೊರೊನಾ ವ್ಯಾಕ್ಸಿನ್ ಮೇಳ ನಡೆಯಲಿದೆ. ತಾಲೂಕಿನಲ್ಲಿ ನಾಳೆ 10,000 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 10,000 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 500, ಭಾಂಶಿಯಲ್ಲಿ 300, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಸಲಕೊಪ್ಪದಲ್ಲಿ 350 ಡೋಸ್, ಇಸಳೂರಿನಲ್ಲಿ 400, ದಾಸನಕೊಪ್ಪ ಜಿ ಪಿ ಹಾಲ್’ನಲ್ಲಿ 400, ಮಾಳಂಜಿ 400, ಹೆಗಡೆಕಟ್ಟಾದಲ್ಲಿ 100, ಹನುಮಂತಿ 100, ದೇವನಳ್ಳಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 200, ಹುಳಗೋಳ ಸೇವಾ ಸಹಕಾರಿ ಸಂಘದಲ್ಲಿ 200, ಪ್ರಾಥಮಿಕ ಆರೋಗ್ಯ ಕೇಂದ್ರ ಕಕ್ಕಳ್ಳಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಮೆಣಸಿ 150, ರಾಗಿಹೊಸಳ್ಳಿಯಲ್ಲಿ 300, ಮಂಜಗುಣಿ 200, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕಣಿಯಲ್ಲಿ 200, ನೀರ್ನಳ್ಳಿ ಜಿ.ಪಿ ಹಾಲ್’ನಲ್ಲಿ 400, ಕಾನಗೋಡ 300, ರಾಮನಬೈಲ್ ಸಭಾಭವನದಲ್ಲಿ 1000, ದೀವಗಿ ಫ್ಯಾಕ್ಟರಿಯಲ್ಲಿ 1000, ರುದ್ರದೇವರ ಮಠದಲ್ಲಿ 1000, ಮರಾಠಿಕೊಪ್ಪದಲ್ಲಿ 1000, ಕಸ್ತೂರಬಾ ನಗರ ಪ್ರಾಥಮಿಕ ಶಾಲೆಯಲ್ಲಿ 1000 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.