ಕುಮಟಾ: ತಾಲೂಕಿನ ಕಿಮಾನಿ ಗ್ರಾಮಕ್ಕೆ ಆಹಾರ ಅರಸಿ ಬಂದಿದ್ದ ಚಿರತೆಯೊಂದು ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬೋನಿನಲ್ಲೇ ಬಂಧಿಯಾಗಿದೆ.
ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲಿಕರು ತಕ್ಷಣ ಬೋನನ್ನು ಲಾಕ್ ಮಾಡಿದ್ದಾರೆ. ಅದೃಷ್ಟವಶಾತ್ ಬೋನಿನಲ್ಲಿ ಇದ್ದ ನಾಯಿ ತಪ್ಪಿಸಿಕೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭಿಸಿ ರಕ್ಷಣೆ ಮಾಡಿದ್ದಾರೆ.