• Slide
    Slide
    Slide
    previous arrow
    next arrow
  • ಬಂಡೆ ಮೇಲೆ ಕುಳಿತು ಫೋಸ್ ಕೊಡುತ್ತಿದ್ದ ವ್ಯಕ್ತಿ ಸಮುದ್ರ ಪಾಲು

    300x250 AD

    ಕುಮಟಾ: ಕಡಲ ತೀರದಲ್ಲಿ ಪ್ರವಾಸಿಗ ಮೋಜು-ಮಸ್ತಿ ಹೆಚ್ಚುತ್ತಿದ್ದು, ಈ ಸಮಯದಲ್ಲಿ ಅತಿರೇಕದ ಸಾಹಸ ಪ್ರದರ್ಶನ, ಇನ್ನಿತರ ಚಟುವಟಿಕೆ ಮಾಡುವ ಭರದಲ್ಲಿ ತಮ್ಮ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿನ ವನ್ನಳ್ಳಿ ಬೀಚ್‍ನಲ್ಲಿ ಪ್ರವಾಸಿಗನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.


    ಮೃತರನ್ನು ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಶಿರಸಿಯ ಸುಬ್ರಹ್ಮಣ್ಯ ಗೌಡ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಪ್ರಸಿದ್ಧ ವನ್ನಳ್ಳಿ ಬೀಚ್ ಗೆ ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಬೃಹತ್ ಅಲೆಗಳು ಬಂದು ಅಪ್ಪಳಿಸುತ್ತಿದ್ದ ಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಪೆÇೀಸ್ ನೀಡಲು ಮುಂದಾಗಿದ್ದಾರೆ.

    300x250 AD


    ಇದು ಭಾರೀ ದುರಂತಕ್ಕೆ ಕಾರಣವಾಗಿದೆ. ಬಂಡೆಯ ಮೇಲೆ ತಪಸ್ಸಿಗೆ ಕುಳಿತಂತೆ ಇದ್ದಾಗ ಭಾರೀ ಗಾತ್ರದ ಅಲೆಯೊಂದು ಬಂದು ಅಪ್ಪಳಿಸಿದೆ. ಈ ವೇಳೆ ಬಂಡೆಯ ಮೇಲೆ ಕುಳಿತಿದ್ದವರು ನೀರು ಪಾಲಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top