ಯಲ್ಲಾಪುರ: ಇದೇ ಬರುವ ಸೆ.17ರಂದು ವಜ್ರಳ್ಳಿ ವ್ಯಾಪ್ತಿಯಲ್ಲಿ ಕರೋನಾ ಲಸಿಕಾ ಮಹಾಅಭಿಯಾನದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋವಿಡ್ ಕಾರ್ಯಪಡೆಯ ವಜ್ರಳ್ಳಿ ವಿಭಾಗದ ನೋಡೆಲ್ ಅಧಿಕಾರಿ ಶ್ರೀಕಾಂತ ದೇವಲತ್ತಿ ಅಭಿಪ್ರಾಯಪಟ್ಟರು.
ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ನಡೆದ ಕೋವಿಡ್ ಕಾರ್ಯಪಡೆಯ ವಿಶೇಷ ಲಸಿಕಾ ಮಹಾಅಭಿಯಾನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ನಿಮ್ಮ ನಿಮ್ಮ ಗ್ರಾಮಗಳ ಮನೆ ಮನೆಯಲ್ಲಿ ಲಸಿಕೆಯನ್ನು ಬೇರೆ ಬೇರೆ ಹಂತದಲ್ಲಿ 2 ಹಂತದಲ್ಲಿ ಪಡೆಯಲು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕರಿಸಬೇಕು. ಕರೋನಾದ ವಿರುದ್ದವಾಗಿ ಲಸಿಕೆ ಪಡೆದು ಮಹಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಹಿರಿಯರು, ಮಹಿಳೆಯರನ್ನು ಈ ಆಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯಾವ ಯಾವ ಹಂತದ ಲಸಿಕೆ ಅಗಿದೆ ಮತ್ತು ಆಗಬೇಕಿದೆ ಎಂದು ತಿಳುವಳಿಕೆ ಪಡೆದು ಲಸಿಕೆ ಹಾಕಲು ಸಂಬಂಧಪಟ್ಟವರು ನೆರವಾಗಬೇಕಿದೆ. ಕೇರಿ-ಊರು ಕೋವಿಡ್ ಮುಕ್ತಮಾಡಲು ಪಣತೊಡೋಣ. ನಮ್ಮ ವಜ್ರಳ್ಳಿಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ವಜ್ರಳ್ಳಿ, ಇಡಗುಂದಿ, ಗುಳ್ಳಾಪುರ, ಅರಬೈಲ್ ಭಾಗಗಳಲ್ಲಿ ಈ ಅಭಿಯಾನ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂಅಧ್ಯಕ್ಷೆ ವೀಣಾ ಗಾಂವ್ಕಾರ ವಹಿಸಿದ್ದರು. ಉಪಾಧ್ಯಕ್ಷರಾದ ರತ್ನ ಬಾಂದೇಕರ್, ಪಂಚಾಯತ ಸದಸ್ಯರಾದ ಗಜಾನನ ಭಟ್ಟ, ತಿಮ್ಮಣ್ಣ ಗಾಂವ್ಕಾರ, ಕಂದಾಯ ಇಲಾಖೆಯ ಶರಣ ಬಸಪ್ಪ ಆರ್ ತುಂಬಗಿ, ಪಶುಸಂಗೋಪನೆಯ ಇಲಾಖೆಯ ಸುಬ್ರಾಯ ಭಟ್ಟ, ಕೆ.ಜಿ.ಹೆಗಡೆ, ಆಶಾಕಾರ್ಯಕರ್ತರು, ಅಂಗನವಾಡಿಯ ಕಾರ್ಯಕರ್ತರಕು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಸಭೆಯನ್ನು ಸ್ವಾಗತಿಸಿ, ನಿರ್ವಹಿಸಿದರು.