ಶಿರಸಿ: ಶಿರಸಿ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಶ್ಯಾಮಸುಂದರ ಭಟ್ಟ ಪದಗ್ರಹಣಗೈದರು.
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಶಿರಸಿ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದ ಉದ್ಘಾಟಕರಾಗಿ ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಆರ್. ವಾಸುದೇವ್ ಮಾತನಾಡಿ, ನನ್ನ ಹುಟ್ಟೂರಾದ ಮಂಡ್ಯ ಜಿಲ್ಲೆಯು ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದೇ ಸರ್ ಎಂ. ವಿಶ್ವೇಶ್ವರಯ್ಯರವನ ಕಾರಣಕ್ಕಾಗಿದೆ. 160 ವರ್ಷಗಳ ಕಾಲ ಒಬ್ಬ ವ್ಯಕ್ತಿಯನ್ನು ಸಮಾಜ ನೆನೆಸುತ್ತದೆ ಎಂದರೆ ಅದು, ಆ ವ್ಯಕ್ತಿಯ ಸಾಮರ್ಥ್ಯವನ್ನು ನಿರೂಪಿಸುತ್ತದೆ. ಪರಿಸರದ ಸಂರಕ್ಷಣೆಯಲ್ಲಿ ಸರ್ ಎಂ ವಿ ಯವರ ಪಾತ್ರ ನಮಗೆ ದಾರಿದೀಪವಾಗಿದೆ. ನಾವೂ ಸಹ ಇಂದಿನಿಂದಲೇ ಪರಿಸರಕ್ಕೆ ಪೂರಕವಾಗಿ ನಡೆಯುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದರು.
ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣಗೈದು ಮಾತನಾಡಿದ ಶ್ಯಾಮಸುಂದರ್ ಭಟ್ಟ, ಅಧ್ಯಕ್ಷ ಪದವಿಯನ್ನು ಅಧಿಕಾರ ಎಂದು ಪರಿಗಣಿಸದೇ ಜವಾಬ್ದಾರಿ ಎಂದು ತಿಳಿದು ಕಾರ್ಯನಿರ್ವಹಿಸಲು ಸಿದ್ಧನಿದ್ದೇನೆ. ಸಮಾಜಮುಖಿ ಕಾರ್ಯದ ಜೊತೆಗೆ ನಮ್ಮೂರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಇದೇ ವೇಳೆ ಶಿರಸಿ ನಗರದಲ್ಲಿ ಸಂಘ ನಿರ್ಮಾಣ ಮಾಡಲು ನಿರ್ಣಯಿಸಿರುವ ಕಟ್ಟಡಕ್ಕೆ ₹ 25,000 ಚೆಕ್ ನ್ನು ಸಂಘದ ಕೋಶಾಧ್ಯಕ್ಷ ಮನು ಹೆಗಡೆಗೆ ನೀಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಚಂದನ್ ಪೈ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಿರಸಿ ಇಂಜಿನಿಯರ್ಸ್ & ಆರ್ಕಿಟೆಕ್ಟ್ ಅಸೋಸಿಯೇಷನ್ ನೂತನ ಉಪಾಧ್ಯಕ್ಷ ವಿನಾಯಕ ಗಾಂವ್ಕರ್, ಕಾರ್ಯದರ್ಶಿ ಎಲ್. ಆರ್. ಹೆಗಡೆ ಮುಂಡಗೆಸರ, ಕೋಶಾಧ್ಯಕ್ಷರ ಮನು ಪಿ ಹೆಗಡೆ, ಸಹಕಾರ್ಯದರ್ಶಿ ರಾಜೇಂದ್ರ ಕುಬ್ಸದ್, ಸಹ ಕಾರ್ಯದರ್ಶಿ ಸುಹಾಸ ಹೆಗಡೆ, ನಿರ್ದೇಶಕರಾದ ಚಂದನ ಪೈ, ಪ್ರವೀಣ ನಾಯಕ, ನಾಗೇಂದ್ರ ಭಟ್ಟ, ಜಯಂತ ನಾಯ್ಕ, ಗಿರೀಶ ಹೆಗಡೆ, ವಿನಯ ಜೋಶಿ ಸೇರಿದಂತೆ ಇನ್ನಿತರರು ಇದ್ದರು.
ಇಂಜಿನಿಯರ್ ವಿನಯ ಜೋಷಿ, ಆರ್ಕಿಟೆಕ್ಟ್ ಪ್ರವೀಣ ನಾಯಕ ನಿರ್ವಹಿಸಿದರು. ಸಚಿನ್ ಹೆಗಡೆ, ಸರ್ ಎಂ ವಿ ಜೀವನ ಚರಿತ್ರೆಯನ್ನು ವಾಚಿಸಿದರು. ಕಾವ್ಯಶ್ರೀ ಹೆಗಡೆ ಪ್ರಾರ್ಥಿಸಿದರು.