• first
    second
    third
    previous arrow
    next arrow
  • ಜಿಲ್ಲೆಯಲ್ಲಿ 459 ದೇವಸ್ಥಾನ ಅನಧೀಕೃತ; ಅಪರ ಡಿಸಿ ಕೃಷ್ಣಮೂರ್ತಿ

    300x250 AD

    ಕಾರವಾರ: ಜಿಲ್ಲೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 1973 ದೇವಸ್ಥಾನಗಳಿದ್ದು ಇದರಲ್ಲಿ 1514 ಅಧಿಕೃತವಿದ್ದು 459 ದೇವಸ್ಥಾನಗಳು ಅನಧಿಕೃತವಾಗಿದೆ ಎಂದು ವರದಿ ಪಡೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ. ತಿಳಿಸಿದ್ದಾರೆ.

    300x250 AD


    ಅನಧಿಕೃತ ಪಟ್ಟಿಯಲ್ಲಿರುವ 459 ದೇವಸ್ಥಾನಗಳ 2009 ರ ಪೂರ್ವದ ದೇವಸ್ಥಾನಗಳಾಗಿದ್ದು ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು, ಅವುಗಳನ್ನು ಮಂಜೂರಿಸುವ, ತಿರಸ್ಕರಿಸುವ ಅಥವಾ ವಿಲೇವಾರಿ ಮಾಡುವ ಬಗ್ಗೆ ಸಮಿತಿಯೇ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ಜಿಲ್ಲಾಧಿಕಾರಿ ಸಭೆ ನಡೆಸಿದ್ದು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಸಮಯ ನಿಗದಿಪಡಿಸಿ, ನಿಯಮದ ಅನುಸಾರ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top