ಯಲ್ಲಾಪುರ: ಪಟ್ಟಣದ ಹೆಸ್ಕಾಂ ಕಚೇರಿ ಸಭಾಭವನದಲ್ಲಿ ಸೆ.18 ಶನಿವಾರ ವಿದ್ಯುತ್ ಗ್ರಾಹಕರ ಅದಲಾತ್ ಹಾಗೂ ಸಂವಾದ ಸಭೆ ನಡೆಯಲಿದೆ.
ವಿದ್ಯುತ್ ಗ್ರಾಹಕರು ಈ ಸಭೆಗೆ ಆಗಮಿಸಿ, ಕುಂದು-ಕೊರತೆಗಳನ್ನು ಹಾಗೂ ವಿದ್ಯುತ್ ಬಿಲ್ ದೂರು, ಜಕಾತಿ ಬದಲಾವಣೆ, ಹೆಸರು ಬದಲಾವಣೆ, ಹೊರೆ ಕಡಿಮೆಗೊಳಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.