ಶಿರಸಿ/ಸಿದ್ದಾಪುರ: ತಾಲೂಕಿನ ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಬಾರ್ಡ್ 25 ಯೋಜನೆಯಡಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮಂಜೂರಾಗಿದೆ.
ಶಿರಸಿ ತಾಲೂಕಿನ ಕುದ್ರಗೋಡ, ಕಾನಗೋಡ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಲಾ 16 ಲಕ್ಷ ರೂ. ಮಂಜೂರಿಯಾಗಿದೆ. ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ, ಬಾಲಿಕೊಪ್ಪ, ಹರಿಗಾರು, ಕಾನಗೋಡು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೂ ತಲಾ 16 ಲಕ್ಷ ರೂ. ಮಂಜೂರಿಯಾಗಿದ್ದು, ಈ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.