ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದ್ಯಸರಿಂದ ಶನಿವಾರದಂದು ಬೇಳೂರಿನ ಸತ್ಯ ಸಾಯಿ ಸೇವಾ ಮಂದಿರದಲ್ಲಿ ಸನ್ಮಾನಿಸಲಾಯಿತು.
ದೇವಳಮಕ್ಕಿ ಸೇವಾ ಸಂಘದ ಸೊಸೃಟಿಯ ಅಧ್ಯಕ್ಷ ಹಾಗೂ ಮಾಜಿ ಪಂಚಾಯಿತಿ ಅಧ್ಯಕ್ಷರಾದ ಬಿಜೆಪಿಯ ತಾಲೂಕು ಗ್ರಾಮೀಣ ಉಪಾಧ್ಯಕ್ಷ ಹುದ್ದೆಯನ್ನು ಹೊಂದಿದ ದೇವಿದಾಸ ಬೇಳೂರಕರ, ಬಿಜೆಪಿ ತಾಲೂಕು ಗ್ರಾಮೀಣ ಪ್ರದಾನ ಕಾರ್ಯದರ್ಶಿ ದತ್ತಾರಾಮ ಬಾಂದೇಕರ, ರೈತ ಮೋರ್ಚಾ ಅಧ್ಯಕ್ಷರಾದ ಮುಕುಂದ್ ಗೌಡ ಹಾಗೂ ದೇವಳಮಕ್ಕಿ ಭಾಗದ ಕ್ರಿಯಾಶೀಲ ಉತ್ಸಾಹಿ ಯುವಕ ಬಿಜೆಪಿ ಗ್ರಾಮೀಣ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿರಾದ ಪ್ರಜ್ವಲ್ ಬಾಬುರಾಯ ಶೇಟ್ ರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ನಿಕಟಪೂರ್ವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದೀಕ್ಷಿತಾ ದೀಪಕ ಹಳದಿಪುರ, ಸದ್ಯಸರಾದ ನಾಗರಾಜ್ ಮಾಜೇರಕರ, ಸಂತೋಷ ಬಾಂದೇಕರ, ಸಂಗೀತಾ ಹುಲಸ್ವಾರ, ಸಹ್ಯಾದ್ರಿ ಗುನಗಿ ನಾಟಕ ಲೇಖಕ ಹಾಗೂ ಕಲಾವಿದರಾದ ದೀಪಕ ಹಳದೀಪುರ ನೆರವೇರಿಸಿದರು..