eUK ವಿಶೇಷ: ‘ಶಿರಸಿ ದುಂಡಸಿ ನಗರವೀಗ ಕಸದ ಅಡ್ಡೆ; ಹೇಳೋರಿಲ್ಲಾ, ಕೇಳೋರಿಲ್ಲಾ’ ಶೀರ್ಷಿಕೆಯಲ್ಲಿ ಮಂಗಳವಾರ ‘e – ಉತ್ತರ ಕನ್ನಡ’ ಪ್ರಕಟಿಸಿದ್ದ ಸುದ್ದಿಗೆ ಶಿರಸಿ ನಗರಸಭೆಯಿಂದ ತುರ್ತುಸ್ಪಂದನೆ ದೊರೆತಿದೆ.
ಬುಧವಾರ ಮುಂಜಾನೆ ಶಿರಸಿ ನಗರಸಭೆಯಿಂದ ಈ ಕುರಿತು ಪ್ರಕಟಣೆ ಲಭ್ಯವಾಗಿದ್ದು, ದುಂಡಸಿ ನಗರದ ಕಸತುಂಬಿದ್ದ ಪ್ರದೇಶವನ್ನು ಸ್ವಚ್ಛಮಾಡಲಾಗಿದೆ.
ನಗರಸಭೆ ಪೌರಾಯುಕ್ತ ಕೇಶವ ಚೌಗುಲೆ ನೇತೃತ್ವದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ್ ನಾಯಕ, ಪ್ರಭಾರ ಆರೋಗ್ಯ ನಿರೀಕ್ಷಕ ನವೀನ್ ಕುಡಾಳ್ಕರ್, ಸೂಪರ್ವೈಸರ್ ರಾಜೇಂದ್ರ, ಸುದೇಶ್, ಶಿವಾಜಿ ಹಾಗೂ ಶರತ್ ಇವರ ಜೊತೆ ಸ್ಥಳ ಪರಿಶೀಲಿಸಿ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆದವರ ಮಾಹಿತಿಯನ್ನು ಕಸದಲ್ಲಿ ಸಿಕ್ಕಂತಹ ವಿಳಾಸಗಳ ಆಧಾರದ ಮೇಲೆ ಗುರುತಿಸಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಹಾಗೂ ಸದರಿ ಖಾಲಿ ಜಾಗದ ಮಾಲೀಕರಿಗೆ ಕಸ ಎಸೆಯುವವರನ್ನು ಗುರುತಿಸುವ ಸಲುವಾಗಿ ಸಿಸಿಟಿವಿ ಸಹ ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೂಪರ್ ಪಾಸ್ಟ್ ನಗರಸಭೆ: ನಗರದ ಮಧ್ಯಭಾಗದಲ್ಲಿ ಕಸದ ರಾಶಿ ತುಂಬಿ ಜನತೆಗೆ ಸಮಸ್ಯೆಯಾಗುತ್ತಿರುವ ಮಾಹಿತಿ ಲಭ್ಯವಾದ ಕೂಡಲೇ, ಅದನ್ನು ತೆರವುಗೊಳಿಸಲು ಮುಂದಾದ ಶಿರಸಿ ನಗರಸಭೆ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಹಾಗು ಸಂಬಂಧಪಟ್ಟ ಅಧಿಕಾರಿಗಳ ಕಾಳಜಿ ಶ್ಲಾಘನೀಯ ಎಂಬುದು ಸ್ಥಳೀಯ ನಿವಾಸಿಯೊಬ್ಬರ ಅಭಿಪ್ರಾಯವಾಗಿದೆ.
‘e – ಉತ್ತರ ಕನ್ನಡ’ ಓದುಗರ ಸಾಮಾಜಿಕ ಕಳಕಳಿ: ಸಾರ್ವಜನಿಕ ಸ್ಥಳದಲ್ಲಿನ ಕಸದ ರಾಷಿಯಿಂದಾಗುತ್ತಿರುವ ಸಮಸ್ಯೆಯ ಕುರಿತಾಗಿ e – ಉತ್ತರ ಕನ್ನಡ’ದ ಓದುಗರೊಬ್ಬರು ಪೋಟೋ ಮತ್ತು ಮಾಹಿತಿಯನ್ನು ನೀಡಿದ್ದರು. ಅದನ್ನು ಪರಿಶೀಲಿಸಿದ ನಂತರ ವರದೊಯನ್ನು ಪ್ರಕಟಿಸಲಾಗಿತ್ತು.