• Slide
    Slide
    Slide
    previous arrow
    next arrow
  • ಸೆ.17ಕ್ಕೆ ಕೋವಿಡ್ ಲಸಿಕಾ ಮೇಳ

    300x250 AD

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ. 17ರಂದು ಬೃಹತ್ ಕೊವಿಡ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಾಹಿತಿ ನೀಡಿದ್ದಾರೆ.


    ಜಿಲ್ಲೆಯಲ್ಲಿ ಈಗಾಗಲೇ 8,70,708 ಜನರಿಗೆ ಮೊದಲನೇ ಡೋಸ್ ಲಸಿಕೆ ಹಾಗೂ 2,85,253 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 1,20,000 ಫಲಾನುಭವಿಗಳು ಮೊದಲನೇ ಡೋಸ್ ಪಡೆದು 84 ದಿನ ಪೂರೈಸಿ 2ನೇ ಡೋಸ್ ಲಸಿಕೆಯನ್ನು ಪಡೆಯಲು ಅರ್ಹರಿದ್ದಾರೆ. ಸುಮಾರು 2 ಲಕ್ಷದಷ್ಟು ಜನರು ಮೊದಲನೇ ಡೋಸ್‍ನ್ನು ಪಡೆಯಲು ಬಾಕಿ ಇದೆ.

    300x250 AD

    ಸೆ. 17 ರಂದು 350 ಲಸಿಕಾ ಕೇಂದ್ರಗಳಲ್ಲಿ ಸುಮಾರು 1 ಲಕ್ಷ ಜನರಿಗೆ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಿದ್ದು ಈ ದಿನದಂದು ಇದುವರೆಗೆ ಒಂದೂ ಡೋಸ್ ಲಸಿಕೆಯನ್ನು ಪಡೆಯದವರು ಹಾಗೂ ಮೊದಲನೇ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದು 84 ದಿನ ಪೂರೈಸಿರುವವರು ಹಾಗೂ ಮೊದಲನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನ ಪೂರೈಸಿರುವವರು, ಗರ್ಭಿಣಿ ಸ್ತ್ರೀಯರು ಹಾಗೂ ಬಾಣಂತಿಯರು ಲಸಿಕೆಯನ್ನು ಪಡೆದುಕೊಂಡು ಕೋವಿಡ್ ಖಾಯಿಲೆಯಿಂದ ಉಂಟಾಗುಬಹುದಾದ ತೊಂದರೆಗಳಿಂದ ರಕ್ಷಿಸಿಕೊಳ್ಳಲು ವಿನಂತಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top