ಸಿದ್ದಾಪುರ: ತಾಲೂಕಿನ ಅವರಗುಪ್ತ ಐಟಿಐ ಕಾಲೇಜ್ ಬಳಿ ಸೋಮವಾರ ಇಬ್ಬರು ಯುವಕರ ನಡುವೆ ಚಾಕು ಇರಿತ ಘಟನೆ ನಡೆದಿದ್ದು, 24 ಗಂಟೆ ಅವಧಿಯಲ್ಲಿ ಆರೋಪಿ ಸುಮನ್ ಗೌಡರ್’ನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಅರಳಿಕೊಪ್ಪದ ಸುಮನ್ ಗೌಡರ ಮತ್ತು ಬಳಟ್ಟೆಯ ಪವನ ನಾಯ್ಕ ನಡುವೆ ಸೋಮವಾರ ಚೂರಿ ಇರಿತ ಘಟನೆ ನಡೆದಿದ್ದು, ಆರೋಪಿಯು ಪವನನ ತಂಗಿ ನಂಬರ್ ನೀಡಬೇಕೆಂದು ಪೀಡಿಸುತ್ತಿದ್ದ. ಆತ ನೀಡದಿದ್ದಕ್ಕಾಗಿ ಪವನ್’ನ ಹೊಟ್ಟೆಯ ಭಾಗಕ್ಕೆ ಹೊಡೆದು ತಕ್ಷಣ ಆರೋಪಿ ನಾಪತ್ತೆಯಾಗಿದ್ದ. ಪವನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳಿಸಿ ಚಿಕಿತ್ಸೆ ನೀಡುತ್ತಿದ್ದರು. ಆರೋಪಿ ಸುಮನ್ ತಲೆ ಬೋಳಿಸಿಕೊಂಡು ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.