ಶಿರಸಿ: ಕಳೆದ ಜುಲೈ 22ರಿಂದ 23ರ ತನಕ ಸುರಿದ ನಿರಂತರ ಭಾರೀ ಮಳೆಗೆ ಕಳಚೆ, ಬಾಳೂರು, ಕರೂರು, ಮತ್ತೀಘಟ್ಟ ಇನ್ನಿತರ ಪ್ರದೇಶಗಳಲ್ಲಿ ಅಪಾರ ಹಾನಿ ಸಂಭವಿಸಿತ್ತು. ಈ ಕಾರಣದಿಂದ ಸಂಕಷ್ಟದಲ್ಲಿ ಇದ್ದ ಜನರಿಗೆ ನೆರವಾಗಲು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಹಮ್ಮಿಕೊಂಡಿದ್ದ ನೆರವಿಗೆ ಕೈ ಜೋಡಿಸಿ ಅಭಿಯಾನ ಸೆ.18ಕ್ಕೆ ಕೊನೆಯಾಗಲಿದೆ. ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸೂಚನೆಯ ಮೇರೆಗೆ ಸಂಗ್ರಹಿತ ದೇಣಿಗೆಯನ್ನು ನಿರ್ವಹಣೆ ಮಾಡಲಾಗುತ್ತದೆ ಎಂದು ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವರ್ ತಿಳಿಸಿದ್ದಾರೆ.
ಅತಿ ಮಳೆಗೆ ಅಪಾರವಾದ ಹಾನಿ ಸಂಭವಿಸಿದೆ. ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಹಾಗೂ ಶ್ರೀಮಠದ ಸಂಘಟನೆಯ ವತಿಯಿಂದ ವಿಶೇಷ ನೆರವನ್ನು ನೀಡಬೇಕೆಂಬುದು ಶ್ರೀಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಮಠ `ನೆರವಿಗೆ ಕೈ ಜೋಡಸಿ’ ಎಂಬ ಮನವಿ ಮಾಡಿತ್ತು. ಈ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.
ಮಠದ ಖಾತೆಗೆ ದಾನಿಗಳು ವಿವಿಧ ಮೊತ್ತ ಪಾವತಿಸಿ ನೆರವಿಗೆ ಕೈ ಜೋಡಿಸಿದ್ದು, ಹತ್ತು ಸಾವಿರ ರೂ.ಗೂ ಅಧಿಕ ಮೊತ್ತ ನೀಡಿದ ದಾನಿಗಳ ಹೆಸರನ್ನು ಬಿಡುಗಡೆಗೊಳಿಸಲಾಗುತ್ತಿದೆ. ಖಾತೆಗೆ ನೇರವಾಗಿ ಸಂದಾಯ ಮಾಡಿದವರ ಎಷ್ಟೋ ಜನರ ಹೆಸರು ಬಾರದೇ ಕೇವಲ ಖಾತೆ ಸಂಖ್ಯೆ ಮಾತ್ರ ಬಂದಿದ್ದರಿಂದ ನೆರವು ನೀಡಿದವರು ಮಠಕ್ಕೆ ಸಂಪರ್ಕ ಮಾಡಿ ಹೆಸರು ವಿಳಾಸ ನೀಡಿದರೆ ಅನುಕೂಲ ಆಗುತ್ತದೆ ಎಂದೂ ಗಾಂವಕರ್ ಮನವಿ ಮಾಡಿದ್ದಾರೆ.
ನೆರವಿಗೆ ಕೈ ಜೋಡಿಸಿ ಅಭಿಯಾನಕ್ಕೆ ಸ್ವತಃ ಸ್ವರ್ಣವಲ್ಲೀ ಸಂಸ್ಥಾನ 5 ಲ.ರೂ. ನೆರವು ನೀಡಿದೆ. ಅಮೇರಿಕಾದ ಹವ್ಯಕ ಸಂಘ ಕೂಡ ಕೈ ಜೋಡಿಸಿದೆ. ಇದರ ಜೊತೆಗೆ ಟಿಎಂಎಸ್ ಯಲ್ಲಾಪುರ 2 ಲ.ರೂ., ಎಸ್.ಎನ್.ಗಾಂವಕರ್ 15 ಸಾ.ರೂ., ಮಹಾಬಲೇಶ್ವರ ರಾಮಚಂದ್ರ 10,001 ರೂ., ವಿನಾಯಕ ರಾ ಭಟ್ಟ ಕೋಟೆಮನೆ 15 ಸಾ.ರೂ., ಭಾಲಚಂದ್ರ ಮಾ ಹೆಗಡೆ 50 ಸಾ.ರೂ., ರಾಮಕೃಷ್ಣ ಕೇಶವ 10 ಸಾ.ರೂ. ಶಿವಸ್ವಾಮೀ ಹೆಬ್ಬಾರ್ 10 ಸಾ.ರೂ, ಸತೀಶ ಸು.ಹೆಗಡೆ 10 ಸಾ.ರೂ, ಅನಂತ ರಾ.ಭಟ್ಟ ಕುಂಬಾರಕೊಟ್ಟಿಗೆ 10 ಸಾ.ರೂ., ರಾಘವೇಂದ್ರ ಹೆಗಡೆ 20 ಸಾ.ರೂ., ಹಾಸಣಗಿ ಸೊಸೈಟಿ 10 ಸಾ.ರೂ., ಕೇಶವ ಹೆಗಡೆ ಗಡೀಕೈ 50,001 ರೂ., ಮಹಾಭಲೇಶ್ವರ ಹೆಗಡೆ ಗಡೀಕೈ 1,37,576 ರೂ., ವಿಶ್ವನಾಥ ಹೆಗಡೆ ನೋಯ್ಡಾ ದಿಲ್ಲಿ 10 ಸಾ.ರೂ., ಸೀಮಾ ಪರಿಷತ ಬೆಂಗಳೂರು 10 ಸಾ.ರೂ., ತ್ಯಾಗಲಿ ಸೊಸೈಟಿ 20 ಸಾ.ರೂ., ಸುರೇಶ ವಿ.ಹೆಗಡೆ 51 ಸಾ.ರೂ., ಎಸ್.ಜಿ.ಹೆಗಡೆ ಭೈರಿ 10 ಸಾ.ರೂ. ನೀಡಿದ್ದಾರೆ.
ಗೆಳೆಯರ ಬಳಗ 11 ಸಾ.ರೂ., ಗೋಪಾಲ ಎನ್.ಹೆಗಡೆ ಹುಳಗೋಳ 15,001 ರೂ., ಮಧುಸೂಧನ ಮಹಾಲೇಶ್ವರ 10 ಸಾ.ರೂ., ಗಣಪತಿ ನಾರಾಯಣ ಹೆಗಡೆ ಬೆಂಗಳೂರು 10 ಸಾ.ರೂ., ಶುಭಾ ಹೆಗಡೆ 10 ಸಾವಿರ ರೂ., ಲಕ್ಷ್ಮೀನಾರಾಯಣ ಭಟ್ಟ ಗುಂಡಕಲ್ 10 ಸಾ.ರೂ., ಮುಂಡಗನಮನೆ ಸೊಸೈಟಿ 10 ಸಾ.ರೂ, ಮೋಹನ ಹೆಗಡೆ ಶಿವಮೊಗ್ಗ 10 ಸಾ.ರೂ, ಯೋಗ ಮಂದಿರ 11 ಸಾ.ರೂ., ಡಾ.ಶಿವಸ್ವಾಮಿ 10 ಸಾ.ರೂ, ಡಾ. ಜಿ.ಎಂ.ಹೆಗಡೆ 50 ಸಾ.ರೂ., ರಾಮಚಂದ್ರ ಜಿ.ಭಟ್ಟ 10 ಸಾ.ರೂ., ವೆಂಕಟರಮಣ ಹೆಗಡೆ 10 ಸಾ.ರೂ., ಕರೂರು ಸೀಮಾ ಪರಿಷತ್ 25 ಸಾ.ರೂ., ಹಿರೇಸರ ಸೊಸೈಟಿ 20 ಸಾ.ರೂ, ತಾರೆಹಳ್ಳಿ ಸೊಸೈಟಿ ಕಾನಸೂರು 20 ಸಾ.ರೂ., ಚಂದಗುಳಿ ದೇವಸ್ಥಾನ 10 ಸಾ.ರೂ ಹಾಗೂ ನರಸಿಂಹ ವೀರಭದ್ರ ಹೆಗಡೆ ಶಿರಸಿ 10 ಸಾ. ರೂ. ನೆರವು ನೀಡಿದ್ದಾರೆ.
ಹೆಸರು ಸಿಗದ ದಾನಿಗಳ ಪಟ್ಟಿಯ ಸಂಗ್ರಹಣೆ ಕಾರ್ಯ ನಡೆದಿದ್ದು, ದೇಣಿಗೆ ನೀಡಿದ ಎಲ್ಲಾ ದಾನಿಗಳಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಸಂಸ್ಥಾನದ ಪರವಾಗಿ ತಿಳಿಸಿದ ಎಸ್.ಎನ್.ಗಾಂವಕರ್, ದೇಣಿಗೆ ನೀಡಿದವರು ತಮ್ಮ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಶ್ರೀ ಮಠದ ಕಾರ್ಯಾಲಯಕ್ಕೆ ತಿಳಿಸಬೇಕು. ಶ್ರೀ ಮಠದ ಸಂಪರ್ಕ ಸಂಖ್ಯೆ 08384-29655,279359,279311ಕ್ಕೆ ಕರೆ ಮಾಡಬಹುದಾಗಿದೆ ಎಂದು ಮನವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.