ಯಲ್ಲಾಪುರ: ತಾಲೂಕಿನ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೊಡ್ಸಳ್ಳಿ ಡ್ಯಾಂ ಸಮೀಪ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಈ ಭಾಗದ ಜನತೆಗೆ ಆತಂಕ ಹೆಚ್ಚಿದೆ.
ಮಲೆನಾಡು ಭಾಗವಾದ ಯಲ್ಲಾಪುರ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಕೊಡಸಳ್ಳಿ ಅಣೆಕಟ್ಟಿನ ಬಳಿ ಅಂದಾಜು 200ಮೀ ಗುಡ್ಡ ಕುಸಿತ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಈ ಹಿಂದೆಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದರ ಬೆನ್ನಲ್ಲೇ ಮಂಗಳವಾರ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಗಾತ್ರದ ಬಂಡೆ ಕಲ್ಲುಗಳು, ಮರ-ಗಿಡಗಳು ಧರೆಗುರುಳಿ ರಸ್ತೆ ಸಂಚಾರ ಬಂದ್ ಆಗಿದೆ. ಜಿಲ್ಲೆಯ ಕೊಡಸಳ್ಳಿ, ಅಣಶಿ, ಕಳಚೆ ಭಾಗದಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, ಈ ಭಾಗದ ಜನತೆಗೆ ಆತಂಕ ಎದುರಾಗಿದೆ.