• first
    second
    third
    previous arrow
    next arrow
  • Trending Now

    ಶಿರಸಿ ದುಂಡಸಿ ನಗರವೀಗ ಕಸದ ಅಡ್ಡೆ; ಹೇಳೋರಿಲ್ಲ, ಕೇಳೊರಿಲ್ಲಾ !

    300x250 AD

    ಶಿರಸಿ: ನಗರದ ಮಧ್ಯಭಾಗಕ್ಕೆ ಹೊಂದಿಕೊಂಡಿರುವ ದುಂಡಶಿ ನಗರದ ಕೆಲವೆಡೆ ಖಾಲಿ ಸ್ಥಳದಲ್ಲಿ ಕಸದ ರಾಶಿ ತುಂಬಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

    ಸ್ಥಳೀಯರು ಬಿಸಾಕಿದ ಕಸವನ್ನು ಬೀದಿ ನಾಯಿಗಳು ಕಚ್ಚಾಡಿ, ಓಡಾಡುವ ರಸ್ತೆಯಲ್ಲಿ ತಂದು ಹಾಕುವುದರಿಂದ ಪಾದಚಾರಿಗಳಿಗೆ ಅಸಹ್ಯ ಉಂಟುಮಾಡುತ್ತಿದೆ. ಹಸಿಕಸ-ಒಣಕಸ ಎಲ್ಲವೂ ಸೇರಿ ದುರ್ಘಂದಪೂರಿತ ವಾಸನೆ ಆ ಪ್ರದೇಶವನ್ನಾವರಿಸಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಒಂದು ಅಸಮಾಧಾನವಿದ್ದರೂ ಅದನ್ನು ಯಾರು ಇನ್ನೂ ಪ್ರಶ್ನಿಸಿದಂತೆ ಕಾಣುತ್ತಿಲ್ಲ.

    300x250 AD

    ಖಾಸಗಿ ಮಾಲೀಕತ್ವವುಳ್ಳ ಜಾಗಗಳಲ್ಲಿ ತ್ಯಾಜ್ಯಗಳಿದ್ದರೆ ಮಾಲೀಕರಿಗೆ ದಂಡವಿಧಿಸುವುದಾಗಿ ಸ್ಥಳೀಯ ಆಡಳಿತವು ಈ ಮುಂಚೆ ಪತ್ರಿಕೆಗಳ ಮೂಲಕ ಮಾಲೀಕರನ್ನು ಎಚ್ಚರಿಸಿತ್ತು. ಆದರೂ ದುಂಡಸಿ ನಗರದ ಕ್ರಾಸ್ ಈ ಜಾಗದ ಮಾಲೀಕರು ಯಾವುದೇ ಕ್ರಮ ಕೈಗೊಂಡಂತೆ ಕಂಡುಬಂದಿಲ್ಲ. ದಿನದಿಂದ ದಿನಕ್ಕೆ ಇಲ್ಲಿ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

    ವಿದ್ಯಾವಂತ ನಗರವಾಸಿಗಳು ತಮ್ಮ ಅನಾಗರೀಕತೆಯನ್ನು ಮರೆಯುತ್ತಿದ್ದಾರಲ್ಲದೆ ಪ್ರಧಾನ ಮಂತ್ರಿಗಳ ಸ್ವಚ್ಛಭಾರತ ಅಭಿಯಾನದ ವೈಫಲ್ಯತೆಗೆ ಕಾರಣರಾಗಿದ್ದಾರೆ. ಸ್ಥಳೀಯ ಆಡಳಿತವು ಮನೆಮನೆಗೆ ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದರೂ ಇಲ್ಲಿ ತ್ಯಾಜ್ಯ ಹೆಚ್ಚುತ್ತಲೇ ಇದೆ. ಜನರ ಸೇವೆಗೆಂದೇ ಮೀಸಲಾದ ಸ್ಥಳೀಯ ಆಡಳಿತವು ಮುಂದೆ ಬಂದು ಯಾವುದೇ ರೀತಿಯ ಕ್ರಮ ಕೈಗೊಳ್ಳಬಹುದಾದರೂ ಈ ಸಮಸ್ಯೆಗೆ ಯಾವುದೇ ಮಾರ್ಗವನ್ನು ಅನುಸರಿಸಿದಂತೆ ಕಂಡುಬಂದಿಲ್ಲ. ಇನ್ನಾದರೂ ಮಾಲೀಕರು ಅಥವಾ ಸ್ಥಳೀಯ ಆಡಳಿತ ಜವಾಬ್ದಾರಿ ವಹಿಸಿ ಕಸವನ್ನು ತೆರವುಮಾಡಿ ಮುಂದೆ ಅಲ್ಲಿ ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top