ಶಿರಸಿ: ತಾಲೂಕಿನ ಶಿರಸಿ ಇಂಜಿನೀಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್‍ಗೆ ಮುಂದಿನ 2 ವರ್ಷಗಳಿಗೆ ನೂತನ ಅಧ್ಯಕ್ಷರಾಗಿ ಶ್ಯಾಮಸುಂದರ ಎಂ ಭಟ್ಟ, ಉಪಾಧ್ಯಕ್ಷರಾಗಿ ವಿನಾಯಕ ಗಾಂವಕರ ಆಯ್ಕೆಯಾಗಿದ್ದಾರೆ.
ಸೆ.4 ರಂದು ನಡೆದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಎಲ್. ಆರ್. ಹೆಗಡೆ ಮುಂಡಗೆಸರ, ಕೋಶಾಧ್ಯಕ್ಷರಾಗಿ ಮನು ಪಿ ಹೆಗಡೆ ಆಯ್ಕೆಯಾಗಿದ್ದಾರೆ. ರಾಜೇಂದ್ರ ಕುಬ್ಸದ್ ಸಹ ಕಾರ್ಯದರ್ಶಿಯಾಗಿ ಮತ್ತು ಸುಹಾಸ ಹೆಗಡೆ ಸಹ ಕೋಶಾಧ್ಯಕ್ಷರಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಚಂದನ ಪೈ, ಪ್ರವೀಣ ನಾಯಕ, ನಾಗೇಂದ್ರ ಭಟ್ಟ, ಜಯಂತ ನಾಯ್ಕ, ಗಿರೀಶ ಹೆಗಡೆ, ವಿನಯ ಜೋಶಿ, ಇವರು ನಿರ್ದೇಶಕರುಗಳಾಗಿ ಆಯ್ಕೆಯಾದರು.
ಶಿರಸಿಯ ಪೂಗಭವನದಲ್ಲಿ ಸೆ. 15 ರಂದು ನಡೆಯುವ ಇಂಜಿನಿಯರ್ಸ್ ದಿನಾಚರಣೆಯ ಶುಭ ಸಂದರ್ಭದಲ್ಲಿ ಅಧ್ಯಕ್ಷ ಚಂದನ ಪೈ ಇವರಿಂದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.