ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾಮದ ವಿಜಯಶ್ರೀ ತಮ್ಮಣ್ಣ ಅರೆಗುಳಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನೆಡೆಸುವ ಸಿ.ಎ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.
ಗೀತಾ ಮತ್ತು ತಮ್ಮಣ್ಣ ಸದಾಶಿವ ಅರೆಗುಳಿ ದಂಪತಿಗಳ ಪ್ರಥಮ ಪುತ್ರಿಯಾದ ಇವಳು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿ.ಪ್ರಾಶಾಲೆ ದೇಹಳ್ಳಿಯಲ್ಲಿ, ಹೈಸ್ಕೂಲನ್ನು ಬಿಸಗೋಡ ಪ್ರೌಢ ಶಾಲೆಯಲ್ಲಿ, ಪಿಯುಸಿಯ ನ್ನು ವೈಟಿಎಸ್‍ಎಸ್ ಕಾಲೇಜ ಯಲ್ಲಾಪುರದಲ್ಲಿ ಕಲಿತ ಇವಳು ಮೊದಲಿನಿಂದಲೂ ಮೊದಲ ಸ್ಥಾನದಲ್ಲೇ ತೇರ್ಗಡೆ ಹೊಂದುತ್ತಾ ಬಂದಿದ್ದಾಳೆ. ಪದವಿಯನ್ನು ಜೆಎಸ್‍ಎಸ್ ಕಾಲೇಜ ಧಾರವಾಡದಲ್ಲಿ ಮುಗಿಸಿ ಸಿಎ ಆರ್ಟಿಕಲ್ ಶಿಪ್’ನ್ನು ವಿನಾಯಕ ಭಟ್ ಎಂಡ್ ಕಂಪನಿ ಹುಬ್ಬಳ್ಳಿಯಲ್ಲಿ ಮಾಡಿದ ಇವಳು ಯಾವುದೇ ವಿಶೇಷ ಕೋಚಿಂಗ ಪಡೆಯದೇ ಪ್ರಥಮ ಹಂತದಲ್ಲೆ ಎಲ್ಲಾ ವಿಷಯವನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿರುವುದು ವಿಶೇಷ.
ಸಾಧನೆಯ ಕುರಿತು ಮಾತನಾಡಿದ ವಿಜಯಶ್ರಿ ಅರೆಗುಳಿ ನನಗೆ ಮುಖ್ಯವಾಗಿ ಕಂಪನಿಯ ಸಿ ಎ ವಿನಾಯಕ ಭಟ್ ಮಾರ್ಗದರ್ಶನದ ಜೊತೆಗೆ ನಿರಂತರ ಅಭ್ಯಾಸ ಹಿರಿಯರ ಆಶೀರ್ವಾದ ಪಾಸ್ ಮಾಡಲೇಬೇಕೆಂಬ ಹಂಬಲ ಸಹಕಾರಿಯಾಯಿತು. ಮುಖ್ಯವಾಗಿ ಸಿ.ಎ ಮಾಡುವವರು ಯಾವಾಗಲೂ ಧೈರ್ಯ ಕಳೆದು ಕೊಳ್ಳಬಾರದು ಎಂದರು.