• Slide
    Slide
    Slide
    previous arrow
    next arrow
  • ಕೋವಿಡ್ ಲಸಿಕಾಭಿಯಾನದಲ್ಲಿ ಭಾರತ ಮಹತ್ವದ ಸಾಧನೆ; 75 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ವಿತರಣೆ

    300x250 AD

    ನವದೆಹಲಿ: ಕೊರೋನಾ ಸಾಂಕ್ರಾಮಿಕ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಲಸಿಕಾ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಗಳಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ದೇಶದಲ್ಲಿ ಈ ವರೆಗೆ ಒಟ್ಟು 75 ಕೋಟಿಗೂ ಅಧಿಕ ಪ್ರಮಾಣದ ಲಸಿಕೆ ನೀಡುವ ಮೂಲಕ, ಲಸಿಕಾ ಅಭಿಯಾನದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆರೋಗ್ಯಪೂರ್ಣ, ಸಮೃದ್ಧ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಈ ಯಶಸ್ಸು ಮಹತ್ವ ಪಡೆದಿದೆ.

    300x250 AD

    ಹಾಗೆಯೇ ಕೇಂದ್ರ ಸರ್ಕಾರ ಈವರೆಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಸುಮಾರು 72.70 ಕೋಟಿ ಡೋಸ್ ಕೊರೋನಾ ಲಸಿಕೆಯನ್ನು ವಿತರಿಸಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ. ಹಾಗೆಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದೆ ಉಳಿದಿರುವ 4,90,36,525 ಕೋಟಿ ಡೋಸ್ ಲಸಿಕೆಗಳಿರುವುದಾಗಿಯೂ ಸಚಿವಾಲಯವು ತಿಳಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ 8,25,000 ಡೋಸ್ ಲಸಿಕೆ ವಿತರಿಸಲಾಗುವುದು ಎಂಬುದಾಗಿಯೂ ಸಚಿವಾಲಯವು ಹೇಳಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top