• Slide
    Slide
    Slide
    previous arrow
    next arrow
  • ಭೂ ಪರಿವರ್ತನೆ ನಿಯಮ ಸರಳೀಕರಣ; ಸಚಿವ ಆರ್.ಅಶೋಕ್

    300x250 AD

    ಬೆಂಗಳೂರು: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಉತ್ತೇಜನ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ನಿಯಮಗಳನ್ನು ಸರಳಗೊಳಿಸಿ, ಕೇವಲ 24 ಗಂಟೆಯಲ್ಲೇ ಭೂ ಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ಕೃಷಿ ಭೂಮಿ ಪರಿವರ್ತನೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ರೂಪಿಸಲಾದ ನಿಯಮಾವಳಿಗಳಿಂದ ಪ್ರಕ್ರಿಯೆಗಳು ಸರಳವಾಗಲಿವೆ. ಈ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಿರ್ಧಾರ ಎದು ಸಚಿವರು ಹೇಳಿದ್ದಾರೆ.

    300x250 AD

    ಈ ಹೊಸ ನಿಯಮಾವಳಿಯಂತೆ ಕಂದಾಯ ಇಲಾಖೆಯು ಭೂ ಪರಿವರ್ತನೆಗೆ ಅರ್ಜಿಯನ್ನು ಉಪ ಆಯುಕ್ತರಿಂದ ಯೋಜನಾ ಪ್ರಾಧಿಕಾರಕ್ಕೆ ಸಲ್ಲಿಸುತ್ತದೆ. ನಂತರ ಕಡತ ಎಲ್ಲಾ ಭೂ ಸ್ವಾಧೀನ ಅಧಿಕಾರಿಗಳಿಗೆ, ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕೊನೆಯಲ್ಲಿ ಗ್ರಾಮ ಲೆಕ್ಕಿಗರಿಗೆ ತಲುಪಲಿದೆ.

    ಈ ಹಿಂದಿನ ವ್ಯವಸ್ಥೆಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ದೀರ್ಘಕಾಲೀಕದ್ದಾಗಿದ್ದು, ಅದನ್ನು ಬದಲಿಸುವ ನಿಟ್ಟಿನಲ್ಲಿ ತಿದ್ದುಪಡಿ ಅಗತ್ಯ ಇರುವುದಾಗಿಯೂ ಅವರು ಹೇಳಿದ್ದಾರೆ. ಪ್ರಕ್ರಿಯೆ ಸರಳಗೊಳಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top