ಯಲ್ಲಾಪುರ: ಸಹ್ಯಾದ್ರಿ ಸಂಚಯದ ಆಶ್ರಯದಲ್ಲಿ ಯಲ್ಲಾಪುರ ಮತ್ತು ಜೋಯಿಡಾ ತಾಲೂಕಿನ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಎರಡು ತಿಂಗಳುಗಳ ಕಾಲ ನಡೆಯುವ ವನ ಚೇತನ ಎಂಬ ಕಾರ್ಯಕ್ರಮ ಉದ್ಘಾಟನೆ ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದೊಳ್ಳಿಯಲ್ಲಿ ಜರುಗಿತು.
ಪಂಚಾಯತ್ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಹೂ ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ವನ ಚೇತನ ಅನಾವರಣಗೊಳಿಸಿ ಇದಕ್ಕೆ ಬೆನ್ನೆಲುಬಾದ ಶ್ರೀ ವಾಸುದೇವ್ ಐತಾಳ ಇವರನ್ನು ಅಭಿನಂದಿಸಿ ಹಾಡಿಯ ಮಕ್ಕಳ ಬದುಕಿಗೆ ನೆರವಾಗುವ ರೀತಿ ತುಂಬಾ ಅನುಪಮವಾದದ್ದು. ಇಂಥ ಸದ್ಧರ್ಮ ಪಾಲಿಸುವವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಸಹ್ಯಾದ್ರಿ ಸಂಚಯದ ಸಂಘಟಕರಾದ ದಿನೇಶ್ ಹೊಳ್ಳ ಮತ್ತು ಅವರ ತಂಡ ಮಕ್ಕಳ ಕಲಿಕೆಗೆ ನೆರವಾಗುವ ಅನೇಕ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂತಸದಾಯಕ ವಾತಾವರಣವನ್ನು ಇಡಿ ಶಾಲೆಯಲ್ಲಿ ಸೃಷ್ಟಿಸಿದ್ದರು ಸಂಪನ್ಮೂಲ ವ್ಯಕ್ತಿಯಾಗಿ ಧಾರಿಣಿ, ಅರವಿಂದ, ಮಮತಾ ಕೆ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಮಾಗೋಡ ಶಾಲೆಗೆ ಸಂವೇದ ವೀಕ್ಷಿಸಲು ದೂರದರ್ಶನವನ್ನು ಶ್ರೀ ವಾಸುದೇವ ಐತಾಳ ಅವರು ಕೊಡುಗೆಯಾಗಿ ನೀಡಿ ಇದು ಹಳ್ಳಿಯ ಮಕ್ಕಳ ಕಲಿಕೆಗೆ ನೆರವಾಗಲಿ ಎಂದು ಆಶಿಸಿದರು. ವೇದಿಕೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ವಿನಾಯಕ ಭಟ್, ಎಂ ಎನ್ ಭಟ್ಟ, ಶಂಕರ್ ಭಟ್, ವಿಶಾಲ ಉಪಸ್ಥಿತರಿದ್ದರು.