ಶಿರಸಿ: ತಾಲೂಕಿನ ಬೆಳಲೆ ಸಮೀಪದ ಮಾತ್ನಳ್ಳಿಯ ಪ್ರವೀಣ ಭಟ್ಟ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಸಾಧನೆಗೈದಿದ್ದಾನೆ.
ಭಾರತಿ ಮತ್ತು ದತ್ತಾತ್ರೇಯ ದಂಪತಿಯ ಪುತ್ರನಾಗಿರುವ ಈತ, ಭೈರುಂಬೆಯ ಶ್ರೀಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಪೂರೈಸಿ, ಶಿರಸಿಯ ಎಮ್‍ಇಎಸ್ ನಲ್ಲಿ ಪದವಿಪೂರ್ವ ಶಿಕ್ಷಣ ಹಾಗು ಮೈಸೂರಿನಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಮೈಸೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾನೆ.
ಈತನ ಸಾಧನೆಗೆ ಪಾಲಕರು, ಹಿತೈಶಿಗಳು ಶುಭಕೋರಿದ್ದಾರೆ.