ಶಿರಸಿ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಸಹಯೋಗದೊಂದಿಗೆ ಒಂದು ಮಿಲಿಯನ್ ಪರಿಸರ ಸ್ನೇಹಿ ಗಣೇಶ ಅಭಿಯಾನವನ್ನು ಸೋಮವಾರ ನಮ್ಮ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ವತಃ ಮಕ್ಕಳೇ ಗೋಧಿ ಹಿಟ್ಟು ಮತ್ತು ಅರಿಶಿಣ ಉಪಯೋಗಿಸಿ ಸುಂದರವಾದ ಅರಿಶಿಣ ಗಣಪತಿಯ ಮೂರ್ತಿಗಳನ್ನು ಮಾಡಿದರು. ಮಕ್ಕಳಿಗೆ ಪರಿಸರ ಸ್ನೇಹಿ ಗಣಪತಿಯನ್ನು ಮುಂದಿನ ದಿನಗಳಲ್ಲಿ ಬಳಸಿ ಪರಿಸರ ಸಂರಕ್ಷಿಸುವಂತೆ ತಿಳಿಸಲಾಯಿತು. ಒಟ್ಟೂ 42 ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಲಯನ್. ರವೀಂದ್ರ ನಾಯಕ್, ಜಂಟಿ ಕಾರ್ಯದರ್ಶಿಗಳಾದ ಲಯನ್. ವಿನಯ ಹೆಗಡೆ, ಉಪಾಧ್ಯಕ್ಷರಾದ ಲಯನ್. ಪ್ರಭಾಕರ ಹೆಗಡೆ, ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಹಾಗೂ ಗೈಡ್ ಕ್ಯಾಪ್ಟನ್ ಚೇತನಾ ಪಾವಸ್ಕರ್, ಸ್ಟೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಅವರು ಉಪಸ್ಥಿತರಿದ್ದರು.