ಮುಂಡಗೋಡ: ನನ್ನ ಮೂಲ ಉದ್ದೇಶ ದೇಶಕ್ಕೆ ಅನ್ನ ನೀಡುವ ಅನ್ನದಾತ ಕೃಷಿಕ ಸುಖಿಯಾಗಲೇ ಬೇಕು. ಅವನು ಸುಖಿಯಾಗದೆ ಹೋದರೆ ಯಾವ ನಾಡು ಸುಖಿಯಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶನಿವಾರ ಬಂಕಾಪೂರ ರಸ್ತೆಯಲ್ಲಿರುವ ಸನವಳ್ಳಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು. ಈ ಕ್ಷೇತ್ರದ ಮೊದಲನೇ ಬಾರಿ ಶಾಸಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆಯವರು ತಾಲೂಕಿನ ರೈತರ ಭವಿಷ್ಯದ ದೃಷ್ಟಿಯಿಂದ ಜಲಾಶಯಗಳ ನಿರ್ಮಾಣದ ಕೆಲಸ ಮಾಡಿದ್ದಾರೆ. ಅವರು ಕಟ್ಟಿದ ಜಲಾಶಯಕ್ಕೆ ಬಾಗಿನ ಅರ್ಪಿಸಿರುವುದು ನನ್ನ ಪುಣ್ಯ. ತಾಲೂಕಿನಲ್ಲಿ 6 ಜಲಾಶಯವನ್ನು ಕಟ್ಟಿ ತಾಲೂಕಿನ ರೈತರ ಜೀವನದಲ್ಲಿ ಶಾಶ್ವತ ಭವಿಷ್ಯದ ಇಚ್ಛಾಶಕ್ತಿ ಮತ್ತು ದೂರದೃಷ್ಟಿ ಬಗ್ಗೆ ಅವರ ಕಾಳಜಿ ತೋರುತ್ತದೆ. ಅವರು ಕಟ್ಟಿದ ಡ್ಯಾಂ ಮತ್ತು ಕೆರೆ ಕಟ್ಟೆಯನ್ನು ನೀರು ತುಂಬುವ ಯೋಜನೆಯನ್ನು ತರಲು ನನಗೆ ಕ್ಷೇತ್ರದ ಜನರು ಅವಕಾಶ ನೀಡಿದ್ದು ನನ್ನ ಬಾಗ್ಯ. ಮುಂದಿನ ವರ್ಷ ಈ ಯೋಜನೆಯನ್ನು ಉದ್ಘಾಟನೆ ಮಾಡುತ್ತೇವೆ. ಇದರಿಂದ 60 ಸಾವಿರ ಎಕರೆ ಎಷ್ಟು ನೀರಾವರಿ ಮತ್ತು ತಾಲೂಕಿನ ಅಂತರ ಜಲ ಹೆಚ್ಚಾಗುತ್ತದೆ. ಮುಂದಿನ ದಿನದಲ್ಲಿ ಬಡ ರೈತನು ಅಡಿಕೆ ಅಂತಹ ಲಾಭದಾಯಕ ಬೆಳೆ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕು. ಆರ್ಥಿಕ ಬೆಳೆ ಬೆಳೆದಾಗ ಮಾತ್ರ ರೈತನಾದವನು ಮುಂದೆ ಬರಲು ಸಾದ್ಯ.
ಸ್ವಾತಂತ್ರ ಬಂದ ಮೇಲೆ ಪುಣ್ಯಾತ್ಮರು ಸುಮಾರು 30 ರಿಂದ35 ಮಂತ್ರಿಯಾದರು ಈ ಸೇತುವೆ ಕಟ್ಟಲು ಆಗಿರಲಿಲ್ಲ. ಆದರೆ ನಮ್ಮ ಅವಧಿಯಲ್ಲಿ ಆ ಕೆಲಸ ಮಾಡಿ ಡ್ಯಾಂ ದುರಸ್ಥಿ ಕೆಲಸ ಮುಗಿಸಿದ್ದೇವೆ ಎಂದು ಆರ್.ವಿ. ದೇಶಪಾಂಡೆಯವರ ಹೆಸರು ಹೇಳಿದೆ ಕಾಲೆಳೆದರು.
ರಾಷ್ಟ್ರೀಯ ಹೆದ್ದಾರಿಯಾಗಿದ್ದ ಈ ರಸ್ತೆ ಆ ಕಾಲದಲ್ಲಿ 5 ಕೋಟಿಯಲ್ಲಿ ಆಗಬೇಕಿದ್ದ ರಸ್ತೆ ಆಗಿಲ್ಲ. ಈಗ ಮೊದಲನೇ ಹಂತದಲ್ಲಿ ಮುಂಡಗೋಡದಿಂದ ಸಿಡ್ಲಗುಂಡಿಯವರೆಗೆ ರಸ್ತೆ ತೆಗೆದುಕೊಂಡಿದ್ದೇವೆ ಅತೀ ಶೀಘ್ರದಲ್ಲಿ ಟೆಂಡರ ಆಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನನ್ನ ಕ್ಷೇತ್ರ ಜೊತೆಯಾಗಿದೆ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾ ರೆ. ಬೊಮಾಯಿ ಅವರ ನಾಯಕತ್ವದಲ್ಲಿ ಅವರು ಕ್ಷೇತ್ರ ಮತ್ತು ನನ್ನ ಕ್ಷೇತ್ರ ಎರಡು ಸಮಗ್ರ ಅಭಿವೃದ್ದಿ ಮಾಡಲು ಸಹಾಕಾರ ನೀಡಿದ್ದಾರೆ ಎಂದರು.
ಸನವಳ್ಳಿ ಭಾಗದ ಗ್ರಾಮಸ್ಥರಿಂದ ದೂರು, ಈ ಜಲಾಶಯವನ್ನು ಚಿಕ್ಕ ನೀರಾವರಿ ಇಲಾಖೆಯವರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಒಂದು ಜಲಾಶಯದ ಸಮಸ್ಯೆ ಅಲ್ಲ. ತಾಲೂಕಿನ ಜಲಾಶಯದ ಸಮಸ್ಯೆ ಇದೆಯಾಗಿದೆ. ಸುಮಾರು 70 ರಿಂದ 100 ಮೀಟರ ಕಾಲುವೆಗಳು ಪುನರನಿರ್ಮಾಣ ಆಗಬೇಕಿದೆ. ಈ ವರ್ಷ 60-70 ಮೀಟರ ದುರಸ್ತಿ ಮಾಡಿಸಲು ಪ್ರಯತ್ನ ಮಾಡುತ್ತಿದ್ದೇನೆ. 1ಕಿ.ಮಿ ಒಂದು ಕೋಟಿ ಬೇಕಾಗುತ್ತದೆ. ನೀರಾವರಿ ಯೋಜನೆಯಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ಹಣವನ್ನು ಮಂಜೂರು ತೆಗೆದುಕೊಂಡಿದ್ದೇನೆ ಅಲ್ಲದೆ ಸದ್ಯದಲ್ಲಿ ಎರಡು ನೀರಾವರಿ ಯೋಜನೆಯಾಗಬೇಕಾಗಿದೆ. ಮತ್ತೇ ನೀರಾವರಿ ಬಗ್ಗೆ ಹಣ ಕೇಳಿದರೆ ಸಚಿವರು ನನ್ನ ಮೇಲೆ ಸೀಟ್ಟು ಆಗುತ್ತಾರೆ.
ರವಿಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ಜಾಡರ ಉಪಾಧ್ಯಕ್ಷ ಸುನೀಲ ಲಮಾಣಿ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ ಗುಡ್ಡಪ್ಪ ಕಾತೂರ, ಶೇಖರ ಲಮಾಣಿ, ಮಂಜುನಾಥ ಕೋಣನಕೇರಿ, ರಾಜು ಗುಬ್ಬಕ್ಕನವರ, ಗೌರೀಶ ಹರಿಜನ್, ರೇಣುಕಾ ಕೋಣನಕೇರಿ, ಗುಡದಯ್ಯಾ ಕಳಸಗೇರಿ ಸುರೇಶ ಕೆರೆಹೊಲದವರ, ಸಂಪತ್ತ ಕ್ಯಾಮಣಕೇರಿ ಮುಂತಾದವರಿದ್ದರು.