ಮುಂಡಗೋಡ: ತಾಲೂಕಿನ ಜೇನಮುರಿ ಅರಣ್ಯದಲ್ಲಿ ವ್ಯಕ್ತಿಯೊಬ್ಬ ಎಮ್ಮೆ ಮೇಯಿಸಲು ಅರಣ್ಯಕ್ಕೆ ಹೊಗಿದ್ದವನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.
ಭಾಗು ಧೂಳು ಕೊಕ್ರೆ(23) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಈತ ಎಂದಿನಂತೆ ಮೇಯಿಸಲು ಅರಣ್ಯದಂಚಿಗೆ ಹೋಗಿ ಮರಳುವಾಗ, ಮರಿಯೊಂದಿಗೆ ಇದ್ದ ಕರಡಿ ದಾಳಿ ಮಾಡಿವೆ. ಕೈಯಲ್ಲಿದ್ದ ಕುಡಗೋಲಿನಿಂದ ರಕ್ಷಿಸಿಕೊಳ್ಳಲು ಭಾಗು ಪ್ರಯತ್ನಿಸಿದ್ದಾನೆ. ಆದರೂ, ಕರಡಿಗಳು ತಲೆಗೆ ಗಂಭೀರವಾಗಿ ಗಾಯಗೊಳಿಸಿವೆ. ಸುದ್ದಿ ತಿಳಿದು 108 ವಾಹನದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ ಬಳೂರು, ಚಾಲಕ ಭೀಮಪ್ಪ ಬಾರಕೇರ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದರು.
ಗಾಯಾಳು ತಾಲೂಕಾ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಶಿವರಾಮ ಹೆಬ್ಬಾರ ಅವರು ಗಾಯಾಳುವನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿ ದೈರ್ಯ ಹೇಳಿ ಸಹಾಯ ಧನ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಶರಧ ನಾಯಕ, ಆಡಳಿತ ವೈಧ್ಯಾಧಿಕಾರಿ ಎಚ್.ಎಫ್ ಇಂಗಳೆ, ಮುಖಂಡರುಗಾಳಾದ ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ ಮುಂತಾದವರಿದ್ದರು.